
ನವೆಂಬರ್ 12 ರಂದು ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿ,ರಾಹುಲ್ ಸುರ್ವೆ ಎಂಬುವರ ಕಾರ್ ಅಡ್ಡಗಟ್ಟಿ ಈ ಗ್ಯಾಂಗ್ ದರೋಡೆ ಮಾಡಿತ್ತು
.ಈ ಕುರಿತು ಹುಬ್ಬಳ್ಳಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆಗಾಗಿ ಸಿಸಿಬಿ ಪೊಲೀಸರ ತಂಡ ರಚನೆ ಮಾಡಿದ್ದ ಹುಧಾ ಪೊಲೀಸ್ ಕಮೀಷನರ್. ಹುಬ್ಬಳ್ಳಿ ಸಿಸಿಬಿ ಪೊಲೀಸರಿಗೆ ತಗಾಲಕಿಕೊಂಡ ಈತ, ಹುಬ್ಬಳ್ಳಿ ಹೊರ ವಲಯದ ಗಬ್ಬೂರು ಬಳಿಯಲ್ಲಿ ಸ್ಥಳ ಮಹಜರು ಮಾಡುವಾಗ ಪಾರೂಕ್ ಮತ್ತು ಕುಟ್ಟಾ ಅಲಿಯಾಸ್ ಬಾಲಕೃಷ್ಣ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾದಾಗ ಹುಬ್ಬಳ್ಳಿ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.
ಈ ಟೊಮೇಟೊ ಪಾರೂಕ್ ಮೇಲೆ ಮಂಗಳೂರು,ಕಾರವಾರ, ಧಾರವಾಡ,ಹಾಗೂ ಹಾವೇರಿ ಸೇರಿದಂತೆ ಕೊಲೆ,ಕೊಲೆಯತ್ನ,ದರೋಡೆ,ಸೇರಿದಂತೆ 17 ಕ್ಕೂ ಹೆಚ್ಚು ವಿವಿಧ ಪ್ರಕರಣಗಳು ದಾಖಲಾಗಿದೆ. ಇತನ ಜೊತೆಗೆ ಕೇರಳ ಎಂ.ಡಿಜುನಾಯಿನ್,ಎಡ್ವಿನ್ ಹಾಗೂ ಫೆಬಿನ್ ಎಂಬ ಆರೋಪಿಗಳು ಸಹ ಅಂದರ್ ಆಗಿದ್ದಾರೆ..
: ಅಷ್ಟೇ ಅಲ್ಲದೇ ಈ ದರೋಡೆ ಗ್ಯಾಂಗ್’ನಲ್ಲಿ ಇನ್ನು ಹಲವು ನಟೋರಿಯಸ್ ರೌಡಿ ಶೀಟರ್’ಗಳು ಸೇರಿದಂತೆ 16 ಕ್ಕೂ ಹೆಚ್ಚು ಜನರು ಭಾಗಿಯಾಗಿರುವ ಮಾಹಿತಿ ಹುಬ್ಬಳ್ಳಿ ಪೊಲೀಸರಿಗೆ ಲಭ್ಯವಾಗಿದ್ದು, ಅವರನ್ನು ಕೂಡಾ ಆದಷ್ಟು ಬೇಗ ಕಂಬಿ ಹಿಂದೆ ಸಿಸಿಬಿ ಪೊಲೀಸರು ತಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ..