ಬೆಳಗಾವಿ
ಅಭಯ್ ಪಾಟೀಲ್ ಅವರ ಕನಸಿನ ಯೋಜನೆ ಹಿರಿಯ ನಾಗರಿಕರ ಮನೋರಂಜನಾ ಕೇಂದ್ರವನ್ನು ಲೋಕಾರ್ಪಣೆ

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರ ಕನಸಿನ ಯೋಜನೆ ಹಿರಿಯ ನಾಗರಿಕರ ಮನೋರಂಜನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ನಿಸರ್ಗರಮ್ಯ ಬ್ಯಾಕ್ಸಿನ್ ಡಿಪೋ ದ ಆರೋಗ್ಯ ಇಲಾಖೆ ಕಾರ್ಯಾಲಯದ ಹಿಂದುಗಡೆ ಶಾಸಕ ಅಭಯ ಪಾಟೀಲ್ ಅವರ ಕನಸಿನ ಯೋಜನೆ ಹಿರಿಯ ನಾಗರಿಕರ ಮನೋರಂಜನ ಕೇಂದ್ರವನ್ನ ಇಂದು ಉದ್ಘಾಟನೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಉಪಮಹಾಪೌರ ಆನಂದ್ ಚೌಹಾಣ್ ಅವರ ಮಾತನಾಡಿ ಶಾಸಕ ಅಭಯ್ ಪಾಟೀಲ್ ಅವರ ಕಾರ್ಯಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಭಾರತದಲ್ಲಿ ಎಲ್ಲೂ ಇಲ್ಲದ ಹಿರಿಯ ನಾಗರಿಕರ ಮನೋರಂಜನ ಕೇಂದ್ರವನ್ನ ಬೆಳಗಾವಿ ದಕ್ಷಿಣದಲ್ಲಿ ಆರಂಭಿಸಲಾಗಿದೆ. ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.