
ಮಾನ್ವಿ ತಾಲೂಕಿನ ಚಿಕ್ಕಕೊಟ್ನೇಕಲ್ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಫಕೀರಮ್ಮ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ
ಉಪಾಧ್ಯಕ್ಷರಾಗಿ ಶೃತಿ ಚನ್ನಪ್ಪಗೌಡ ಅವಿರೋಧವಾಗಿ ಆಯ್ಕೆ
ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಖಾಲಿದ್ ಅಹ್ಮದ್
ಒಟ್ಟು 23 ಸದಸ್ಯರ ಪೈಕಿ 18 ಸದಸ್ಯರು ಸಭೆಯಲ್ಲಿ ಭಾಗಿ
ಮಾನ್ವಿ ತಾಲೂಕಿನ ಚಿಕ್ಕ ಕೊಟ್ನೇಕಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಫಕೀರಮ್ಮ ಶಿವನಪ್ಪ ಉಪಾಧ್ಯಕ್ಷರಾಗಿ ಶೃತಿ ಚನ್ನಪ್ಪಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಿಕ್ಕ ಕೊಟ್ನೇಕಲ್ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನವು ಎಸ್ಟಿಗೆ ಮೀಸಲಾಗಿತ್ತು,ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಫಕೀರಮ್ಮ ಅಧ್ಯಕ್ಷರಾದರೆ ಉಪಾಧ್ಯಕ್ಷರಾಗಿ ಶೃತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲೂಕ ಪಂಚಾಯತಿ ಇಒ ಖಾಲಿದ್ ಅಹ್ಮದ್ ತಿಳಿಸಿದರು.
ಅಧ್ಯಕ್ಷರಾಗಿ ಫಕೀರಮ್ಮ ಮತ್ತು ಉಪಾಧ್ಯಕ್ಷರಾಗಿ ಶೃತಿ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ನರಸರಡ್ಡಿನಾಯಕ ಸೇರಿದಂತೆ ಅಭಿಮಾನಿಗಳು ಪಂಚಾಯತಿ ಮುಂದೆ ಸನ್ಮಾನಿಸಿ ಗೌರವಿಸಿದರು.