
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಗ್ಗೆ ಚರ್ಚೆಯನ್ನು ಈ ವಾರ ನಡೆದ ಅಧಿವೇಶನದಲ್ಲಿ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ವಿನಾಕಾರಣ ಬಿಜೆಪಿಯವರು ಅಭಿವೃದ್ಧಿ ಕುರಿತಾಗಿ ಯಾವುದೇ ಚರ್ಚೆ ಮಾಡಲ್ಲ,ಒಂದು ಜಾತಿಯ ಸಮುದಾಯ ಟಾರ್ಗೆಟ್ ಮಾಡಿ ಕೆಲವು ವಿಚಾರಗಳ ಕುರಿತು ದಾಂಧಲೆ ಮಾಡಿ ಅಧಿವೇಶನದ ಸಮಯವನ್ನು ಹಾಳು ಮಾಡ್ತಿದ್ದಾರೆ.
ಇನ್ನು ಅಧಿವೇಶ ಕೇವಲ ನಾಲ್ಕು ದಿನಗಳ ಕಾಲ ಉಳಿದಿದ್ದು ಈಗಲಾದರೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ಆಗಬೇಕು.ಇನ್ನು ಮೇಲಾದ್ರೂ ಬಿಜೆಪಿಯವರು ಈ ಬಗ್ಗೆ ತಿಳಿದು ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಅಂತಾ ಬಿಜೆಪಿಗರಿಗೆ ಅಬ್ಬಯ್ಯ ಹೇಳಿದರು.