
ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ: 8.50 ಲಕ್ಷದ ಮೌಲ್ಯದ ನಕಲಿ ಮದ್ಯ ವಶಕ್ಕೆ
ನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ನಕಲಿ ಮಧ್ಯ ಹಾಗೂ ಸ್ಪಿರೀಟ್ ವಶ ಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಹೊರ ಭಾಗದಲ್ಲಿ ಜಮೀನಿನಲ್ಲಿ ನಡೆದಿದೆ. ಜಮೀನಿನ ಮಾಲೀಕ ಅಮೋಘಸಿದ್ದ ಹೂಗಾರ ಹಾಗೂ ನಕಲಿ ಮದ್ಯ ತಯಾರು ಮಾಡುವ ಪರಿಣತ ಹೊಂದಿರುವ ಹುಬ್ಬಳ್ಳಿಯ 5 ಜನನ್ನು ಬಂಧಿಸಲಾಗಿದೆ.
ಕೃಷ್ಣಾ ಬಾಂಡಗೆ, ಅಕ್ಷಯ ಜಾಧವ್, ಅಭಿಷೇಕ್ ಜಾಧವ್, ನಾಗರಾಜ ಭೋಜಗೇರಿ, ವಿನಾಯಕ ಕಲಾಲ ಬಂಧಿತ ಆರೋಪಿಗಳು. ಬಂದಿತರಿಂದ 561 ಲೀಟರ್ ನಕಲಿ ಮಧ್ಯವಿರಿಸಿದ್ದ 65 ಬಾಕ್ಸ್, 200 ಲೀಟರ್ ಸ್ಪಿರೀಟ್ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ, ಸಿಪಿಐ ಮಹಾದೇವ ಪೂಜಾರಿ, ರಾಹುಲ್ ನಾಯಕ ಎಂ ಡಿ ಕಬಾಡೆ ಹಾಗೂ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.