ಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ

ಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ ಸಾವಿರ ಕಿ,ಮೀ ದೂರದಲ್ಲಿದೆ. ಈ ಸ್ಥಳಗಳನ್ನು ಅಭಿವೃದ್ದಿ ಮಾಡಲು ಶಾಸಕರಿಗೆ ಕಿವಿ ಮಾತು ಹೇಳಿ ಎಂದು ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟರು.
ಕಲಬುರಗಿಯಿಂದ ಏಳು ಜನ ಶಾಸಕರು, ಕಲ್ಯಾಣ ಕರ್ನಾಟಕದಿಂದ ಐದು ಜನ ಎಮ್.ಪಿ ಗಳನ್ನ ಕಳುಹಿಸಿದ್ದೆವೆ. ಈಗ ಜಯದೇವ ಆಸ್ಪತ್ರೆಯಾಗಿದೆ. ಇದರ ಜೊತೆಗೆ ನಿಮಾನ್ಸ್ ಆಸ್ಪತ್ರೆಯ ಬ್ರ್ಯಾಂಚ್ ಇಲ್ಲಿ ನಿರ್ಮಾಣ ಆಗಬೇಕು,
ಡಯಾಬೇಟೋಲಜಿ ಕೂಡ ಇಲ್ಲಿ ನಿರ್ಮಾಣವಾಗಬೇಕು. ಸಿದ್ದರಾಮಯ್ಯನವರು ಇಲ್ಲಿಯ ಶಾಸಕರಿಗೆ ಕಿವಿ ಮಾತು ಹೇಳಿ ಕೆಲಸ ಮಾಡಿಸಬೇಕು ಎಂದು ಹೇಳಿದರು.ಮುಂದುವರಿದು ಮಾತನಾಡಿದ ಖರ್ಗೆ ‘ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ.
ಇಲ್ಲಿ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ , ವಿದ್ಯಾರ್ಥಿಗಳು ಸಂಶೋಧನೆ ಮಾಡೋದಕ್ಕೆ ಆಗುತ್ತಿಲ್ಲ. ಮೈಸೂರಿಗೆ 300 ಕೋಟಿ ಕೊಟ್ಟಿದ್ದೀರ ಅಲ್ವಾ ಎಂದು ಸಿದ್ದರಾಮಯ್ಯರಿಗೆ ಪ್ರಶ್ನಿಸಿದರು. ಈ ವೇಳೆ ಸಿದ್ದರಾಮಯ್ಯ 100 ಕೋಟಿ ಕೊಟ್ಟಿದ್ದೇನೆ ಎಂದು ಹೇಳಿದರು.
ಕಲಬುರಗಿ : ನಗರದ ಡಾ. ಎಸ್.ಎಂ ಪಂಡಿತ್ ರಂಗಮಂದಿರದ ಎದುರಿನ ಏಳು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಜಯದೇವ ಹೃದ್ರೋಗ ವಿಜ್ಙನ ಮತ್ತು ಸಂಶೋಧನ ಸಂಸ್ಥೆಯ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್ ಖರ್ಗೆ ಉದ್ಘಾಟಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್ ಗೈರಾಗಿದ್ದರು.
ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವಿಕ್ಷೀಸದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರೊಂದಿಗೆ ಸೇರಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಒಟ್ಟು 371 ಬೆಡ್ ಸಾಮರ್ಥ್ಯವಿರುವ ನೂತನ ಜಯದೇವ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು.
ಆಸ್ಪತ್ರೆ ಬೆಡ್ ಸಾಮಾರ್ಥ್ಯ 371 ಏಕೆ !
ಸಂವಿಧಾನದ ಅನುಚ್ಚೇದ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಷೇಶ ಅನುದಾನ ನೀಡಲಾಗುತ್ತಿದ್ದು. ಅದರ ಅನುದಾನದಲ್ಲಿ ಜಯದೇವ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅದರ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುಚ್ಚೇದ 371 ನೀಡಿದ 10ನೇ ವರ್ಷದ ಸವಿ ನೆನಪಿಗಾಗಿ ಆಸ್ಪತ್ರೆ ಬೆಡ್ ಸಾಮರ್ಥ್ಯವನ್ನು 371 ಇಡಲಾಗಿದೆ. ಈ ಜಯದೇವ ಹೃದ್ರೋಗ ಆಸ್ಪತ್ರೆ ರಾಜ್ಯದ ಮೂರನೇ ಹೃದಯ ಆಸ್ಪತ್ರೆ ಎಂಬ ಕೀರ್ತಿಗೆ ಕಾರಣವಾಗಿದೆ.