ರಾಜಕೀಯರಾಜ್ಯ

ಗೋವಾಗೆ ತೆರಳುವ ಕ್ಯಾಂಟರ್​​ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ

ಧಾರವಾಡ: ಕ್ಯಾಂಟರ್​​ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ಭಾನುವಾರ ರಾತ್ರಿ ನಡೆದಿದೆ.

ಕ್ಯಾಂಟರ್​​ ವಾಹನದಲ್ಲಿದ್ದ ಹನುಮಂತಪ್ಪ ಮಲ್ಲದ, ಮಹಾಂತೇಶ ಚವ್ಹಾಣ, ಮಹದೇವ ಹುಳೊಳ್ಳಿ ಮೃತರು. ಸಾವನ್ನಪ್ಪಿದವರು ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಶಿರಸಂಗಿಯಿಂದ ಗೋವಾಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ.

Related Articles

Leave a Reply

Your email address will not be published. Required fields are marked *

Back to top button