ಧರ್ಮಸ್ಥಳಕ್ಕೆ ಬರಲು ರೆಡಿ ; ಓಪನ್ ಚಾಲೆಂಜ್ ಒಪ್ಪಿಕೊಂಡ ಸಿಟಿ ರವಿ!

ಚಿಕ್ಕಮಗಳೂರು: ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ.ಬೆಳಗಾವಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪದಡಿ ಸಿಟಿ ರವಿಯನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಇಂದು ಪ್ರೆಸ್ ಮೀಟ್ಗೆ ಸಿಟಿ ರವಿ ಬಂದಿದ್ದ ಸಂದರ್ಭದಲ್ಲಿ
ಲಕ್ಷ್ಮಿ ಹೆಬ್ಬಾಳ್ಕರ್ ಹಾಕಿದ ಓಪನ್ ಚಾಲೆಂಜ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಟಿ ರವಿ ಧರ್ಮಸ್ಥಳಕ್ಕೆ ಬಂದು, ನಾನು ಆ ಪದ ಬಳಸಿಯೇ ಇಲ್ಲ ಅಂತ ಹೇಳಲಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದರು. ನಾನು ದೇವರನ್ನು ನಂಬಿದ್ದೀನಿ, ನೀವೂ ದೇವರನ್ನು ನಂಬಿದ್ದೀರಿ. ನಿಮ್ಮ ಊರಿಗೆ ತುಂಬಾ ಹತ್ರ ಧರ್ಮಸ್ಥಳ ಇದೆ. ಬನ್ನಿ ನೀವೂ ಪ್ರಮಾಣ ಮಾಡಿ. ನಾನೂ ಪ್ರಮಾಣ ಮಾಡ್ತೀನಿ ಅಂತ ಸಚಿವೆ ಸವಾಲು ಹಾಕಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಧರ್ಮಸ್ಥಳಕ್ಕೂ ಬರ್ತೀನಿ. ಮಧ್ಯರಾತ್ರಿ ದೇವಿಯ ಮುಂದೆ ಹೋಗಿ ಹರಕೆ ಹೊತ್ತುಕೊಂಡಿದ್ದೆ. ಆದ್ದರಿಂದ ಸೌದತ್ತಿ ಯಲ್ಲಮ್ಮನ ಬಳಿಗೂ ಹೋಗ್ತೀನಿ ಎಂದು ಹೇಳಿದ್ದಾರೆ.