ಕಲಬುರ್ಗಿ

ಭಾಗ್ಯವಂತಿ ದೇವಿಯ ಹುಂಡಿಯಲ್ಲಿತ್ತು ವಿಚಿತ್ರ ಹರಕೆಯ ನೋಟ್…!

ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ  ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ  ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿ ಎಣಿಕೆ ಮಾಡುವ ವೇಳೆ ವಿಚಿತ್ರ ಹರಕೆಯ ನೋಟ್​ ಪತ್ತೆಯಾಗಿದೆ.

ಅತ್ತೆ ಸಾಯಬೇಕೆಂದು ಬರೆದಿರುವ 20 ರೂ. ಮುಖಬೆಲೆಯ ನೋಟ್ ಪತ್ತೆಯಾಗಿದೆ. “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು” ಅಂತ 20 ರೂ. ಮುಖಬೆಲೆಯ ನೋಟ್ ಮೇಲೆ ಬರೆದು ಹುಂಡಿಯಲ್ಲಿ ಹಾಕಲಾಗಿದೆ.ಹುಂಡಿ ಎಣಿಕೆ ಕಾರ್ಯ ವೇಳೆ ನೋಟ್​ ಪತ್ತೆಯಾಗಿದೆ. ನೋಟ್​ನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅತ್ತೆ ಸಾಯಲೆಂದು ಸೊಸೆ ಈ ರೀತಿಯಾಗಿ ಬರೆದು ಹಾಕಿದ್ದಾಳೆ ಎಂದು ಊಹಿಸಲಾಗಿದೆ. ಹುಂಡಿಯಲ್ಲಿ 60 ಲಕ್ಷ ನಗದು, ಒಂದು ಕೆಜಿ ಬೆಳ್ಳಿ, 200 ಗ್ರಾಂ ಚಿನ್ನಾಭರಣ ಹುಂಡಿಯಲ್ಲಿ ಹಾಕಲಾಗಿತ್ತು.

Leave a Reply

Your email address will not be published. Required fields are marked *

Back to top button