
ಮೋಳೆ ಗ್ರಾಮ ಪಂಚಾಯತಿಯಲ್ಲಿ ಭಾರಿ ಗೋಲಮಾಲ್..! ಕಾಗದಲ್ಲಿಯೇ ಅಭಿವೃದ್ಧಿಗೊಂಡ ರಸ್ತೆಗಳು..!! ಮುಖಂಡರಿAದ ಗಂಭೀರ ಆರೋಪ..!!!
ಕಾಗವಾಡ: ತಾಲೂಕಿನ ಮೋಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯಲ್ಲಿ ಭಾರಿ ಗೋ¯ಮಾಲ್ ನಡೆದಿದೆ ಎಂದು ಗ್ರಾಮದ ಮುಖಂಡ ಪಿಂಟು ಮುಂಜೆ ಆರೋಪಿಸಿದ್ದಾರೆ. ಅವರು ಶನಿವಾರ ದಿ. 26 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಮೋಳೆ-ಮಂಗಸೂಳಿ ರಸ್ತೆಯ ಲಾಂಡಗೆ ತೋಟದ ರಸ್ತೆ ಮುರಮೀಕರಣ ಕಾಮಗಾರಿ ಮಾಡದೇ ಅನುದಾನ ಬಿಡುಗಡೆಗೊಳಿಸಿ, ಅವ್ಯವಹಾರ ಮಾಡಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳ ಹಿಂದೆ ಅನುಮೋದನೆ ದೊರೆತಿದ್ದು, ಈ ಅವಧಿಯಲ್ಲಿ ಮುರಮೀಕರಣ ಮಾಡದೇ ಹಣ ಬಿಡುಗಡೆಯಾಗಿದ್ದು, ರಸ್ತೆ ಕೇವಲ ಕಾಗದದಲ್ಲಿ ಮಾತ್ರ ಅಭಿವೃದ್ಧಿಗೊಂಡಿದೆ. ಈಗ ನಾನು ಅದೇ ರಸ್ತೆ ಮೇಲೆ ನಿಂತು ರಸ್ತೆಯ ದುರ್ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
ಈ ಅವ್ಯವಹಾರದಲ್ಲಿ ತಾಲೂಕಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರ ತನಿಖಾಧಿಕಾರಿಗಳ ಮುಖಾಂತರ ಸಣ್ಣ-ಪುಟ್ಟ ತಪ್ಪುಗಳನ್ನು ಹಿಡಿದು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ, ಶೋಕಿ ನೀಡುತ್ತಿರುವುದು ಒಂದೆಡೆಯಾದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬAತೆ ಲಕ್ಷಾಂತರ ರೂಪಾಯಿಗಳ ದೊಡ್ಡ-ದೊಡ್ಡ ಅವ್ಯವಹಾರಗಳಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದರೂ, ಸಣ್ಣ-ಸಣ್ಣ ಅವ್ಯವಹಾರಗಳಲ್ಲಿ ತೋರುವ ಕರ್ತವ್ಯ ನಿಷ್ಠೆಯನ್ನು ತನಿಖಾಧಿಕಾರಿಗಳು ದೊಡ್ಡ ಗಾತ್ರದ ಅವ್ಯವಹಾರಗಳಲ್ಲಿ ತೋರಿಸಲಿ ಎಂಬುದೇ ಸಾರ್ವಜನಿಕರ ಆಗ್ರಹವಾಗಿದೆ.