
ಬೆಳಗಾವಿಯ ಡಾ.ಹರ್ಷಾ ಅಷ್ಟೇಕರ್ ಅವರಿಗೆ ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪ್ರದಾನ
ಬೆಳಗಾವಿಯ ಡಾ.ಹರ್ಷಾ ಅಷ್ಟೇಕರ್
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪ್ರದಾನ
ಸಂಶೋಧನೆಗಾಗಿ 4 ಲಕ್ಷ ರೂಪಾಯಿ ಅನುದಾನ
ಡಾ. ನಿಮ್ಮಿ ವರ್ಗೀಸ್ ಮಾರ್ಗದರ್ಶನ
ಬೆಳಗಾವಿಯ ಸದಾಶಿವನಗರ ನಿವಾಸಿ ಡಾ.ಹರ್ಷಾ ಅಷ್ಟೇಕರ್ ಅವರು ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದಿಂದ ಫಾರ್ಮಾಕಾಲಜಿಯಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ಪಾರ್ಕಿನ್ಸನ್ ಕಾಯಿಲೆಯ ಚಿಕಿತ್ಸೆಯಲ್ಲಿ ಪೈರಜೋಲೋನ್ ಉತ್ಪನ್ನಗಳ ವಿನ್ಯಾಸ ಅಭಿವೃದ್ಧಿ ಅವರ ವಿಶೇಷ ಕೋರ್ಸ್ನ್ನು ಇವರು ಆಯ್ಕೆ ಮಾಡಿದ್ದರು.
ಡಾ. ಹರ್ಷಾ ಅವರು ಮಹಿಳಾ ವಿದ್ಯಾಲಯ ಮರಾಠಿ ಮೂಲಕ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಮರಾಠಾ ಮಂಡಲ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ಇವರಿಗೆ ಪಿಎಚ್ ಡಿ ಪಡೆಯಲು ಡಾ. ನಿಮ್ಮಿ ವರ್ಗೀಸ್ ಅವರ ಅಮೂಲ್ಯವಾದ ಮಾರ್ಗದರ್ಶನ ದೊರೆತಿದೆ. ಡಾ ಹರ್ಷ ಅವರು ಪಾರ್ಕಿನ್ಸನ್ ಕಾಯಿಲೆಯ ಚಿಕಿತ್ಸೆಗಾಗಿ ಪೈರಜೋಲೋನ್ ಅಣುಗಳ ಮೇಲೆ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದ್ದು, ಈ ಸಂಶೋಧನೆಗಾಗಿ ನಿಟ್ಟೆ ವಿಶ್ವವಿದ್ಯಾಲಯದಿಂದ ನಾಲ್ಕು ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಪಿಎಚ್ಡಿ ಪಡೆದ ಹಿನ್ನೆಲೆ ಇವರಿಗೆ ಪ್ರಶಂಸೆ ಮತ್ತು ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಅವರ ಈ ಯಶಸ್ಸಿನ ಶ್ರೇಯವನ್ನು ಅವರು ತಮ್ಮ ತಾಯಿ ರೂಪಾ ಅಷ್ಟೆಕರ್ ಅವರಿಗೆ ಸಲ್ಲಿಸಿದ್ದಾರೆ.