
ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ಲೂಟಿಗೆ ಯತ್ನ
ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮಕ್ಕೆ ಹೋಗುವ ರಸ್ತೆ ಕಾಮುಗಾರಿ
ರೈತ ಸಂಘದ ಮುಖಂಡರ ಭೇಟಿಯಿಂದ ಕಳಪೆ ಕಾಮಗಾರಿ ಬಟಾಬಯಲು
ಗುತ್ತಿಗೆದಾರ ಮೋಹನರಿಂದ ಕಳಪೆ ಕಾಮಗಾರಿ ಎಂದು ಆರೋಪ
ಲೋಕೋಪಯೋಗಿ ಇಲಾಖೆ ಎಇಇ ಸಾಮುವೇಲಪ್ಪ ನಿಮ್ಮ ಕೆಲಸವಾದರೂ ಏನಪ್ಪ
ಮಾನ್ವಿ ಲೋಕೋಪಯೋಗಿ ಇಲಾಖೆಯಿಂದ ಕರಡಿಗುಡ್ಡ
ಗ್ರಾಮದ ರಸ್ತೆಗೆ ಸಿಸಿ ರಸ್ತೆ ನಿರ್ಮಾಣ ಮಾಡುವುದಕ್ಕೆ 2023-24ನೆ ಸಾಲಿನ 50 ಲಕ್ಷ ಅನುದಾನ ಗುತ್ತಿಗೆದಾರ ಮೋಹನ ಕಳಪೆ ಕಾಮಗಾರಿ ಮಾಡಿ ಜೆಇ ಮಕ್ಸೂದ್ ಎಇಇ ಸಾಮುವೇಲಪ್ಪ ಲೂಟಿ ಮಾಡಿದ್ದಾರೆಂದು ರೈತ ಸಂಘದ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಅಂದಾಜು ಪತ್ರಿಕೆಯಂತೆ ಎಇಇ ಸಾಮುವೇಲಪ್ಪ, ಜೆಇ ಮಕ್ಸೂದ್, ಗುತ್ತಿಗೆದಾರ ಮೋಹನ ಕಾಮಗಾರಿ ಮಾಡಬೇಕಾಗಿತ್ತು
ಆದರೇ ರೈತ ಸಂಘದ ಮುಖಂಡರು ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ವೀಕ್ಷಣೆ ಮಾಡಿರುವುದರಿಂದ ಸರಿಯಾಗಿ ನೀರು ಸಿಂಪರಣೆ ಮಾಡದೆ ಇರುವುದು ಇದು ಕಳಪೆ
ಕೆಲಸ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.
ಸರಕಾರ ಕರಡಿಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಯ ಕಾಮಗಾರಿ ಸಂಬಂಧ ಸಮಗ್ರವಾಗಿ ತನಿಖೆ ಮಾಡಿದರೆ, ಕಳಪೆ ಕಾಮಗಾರಿ ನಡೆದಿರುವುದು ಸತ್ಯ ಎಂದು ಬಯಲಿಗೆ ಬರಲಿದೆ ಎಂಬುದು ಪಕ್ಕಾ ಎಂದು ರೈತ ಸಂಘದ ಮುಖಂಡರ ಆಗ್ರಹವಾಗಿದೆ.