Uncategorized

ಅ.28 ರ ಬೈಲಹೊಂಗಲ ಬಂದ್ ವಾಪಸ್

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ವತಿಯಿಂದ ಅ.21 ರಂದು ನೀಡಿದ್ದ ಬೈಲಹೊಂಗಲ ಬಂದ್ ಕರೆಯನ್ನು ಪಟ್ಟಣದ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಭಾನುವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ವಾಪಸ್‌ ಪಡೆಯಲಾಯಿತು.

ಬೈಲಹೊಂಗಲದ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಚನ್ನಮ್ಮನ 200ನೇ ವಿಜಯೋತ್ಸವದ ಅಂಗವಾಗಿ ಸಮಾಧಿ ಸ್ಥಳ ಸ್ವಚ್ಚತೆ, ಅಲಂಕಾರ, ಶಾಲೆ, ಕಾಲೇಜು, ಸಂಘ, ಸಂಸ್ಥೆ, ರೂಪಕಗಳ ಜೊತೆ ಭವ್ಯ ಮೆರವಣಿಗೆ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು.

ಸುತ್ತಮುತ್ತಲಿನ ಕಲಾವಿದರೊಂದಿಗೆ ಕಲಾಮೇಳ, ರಸಮಂಜರಿ ನಡೆಸಬೇಕು.

ಫೆ.2 ರಂದು ಸರ್ಕಾರದಿಂದ ಚನ್ನಮ್ಮನ ಸ್ಮರಣೋತ್ಸವ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗೆ ಸಮಿತಿ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸದ್ದರಿಂದ ಬೈಲಹೊಂಗಲ ಬಂದ್ ಕರೆ ನೀಡಲಾಗಿತ್ತು. ಮನವಿಗೆ ಸ್ಪಂದನೆ ಸಿಕ್ಕಿದ್ದರಿಂದ ಶಾಸಕರ, ಅಧಿಕಾರಿಗಳ ಭರವಸೆ ಮೇರೆಗೆ ಬಂದ್‌ ಕರೆ ವಾಪಸ್ ಪಡೆಯಲಾಗಿದೆ.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಹೋರಾಟಗಾರ ಬೇಡಿಕೆಯಂತೆ ಅ.28 ರಂದು ರಾಜ್ಯ ಸರ್ಕಾರದಿಂದ ಕಾರ್ಯಕ್ರಮ ಆಯೋಜಿಸಲಾಗುವುದು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ರೂಪಕಗಳು, ಕಲಾಮೇಳ ಮೆರವಣಿಗೆ, ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button