Uncategorized
ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ!!! ಬೆಳಗಾವಿ ಪೊಲೀಸರಿಂದ ಹೆಚ್ಚಿದ ತನಿಖೆ

ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ!!!
ಬೆಳಗಾವಿ ಪೊಲೀಸರಿಂದ ಹೆಚ್ಚಿದ ತನಿಖೆ
• ಉದ್ಯಮಬಾಗದ ಕಸದ ರಾಶಿಯಲ್ಲಿ ಜೀವಂತ ಗುಂಡುಗಳು.
• ಬರೋಬ್ಬರಿ 59 ಸಜೀವ ಬುಲೆಟ್‌ಗಳು ಪತ್ತೆ.
• ಸ್ಥಳಕ್ಕೆ ಧಾವಿಸಿದ ಉದ್ಯಮಬಾಗ ಪೊಲೀಸರು.
• ಕೈಗಾರಿಕಾ ಪ್ರದೇಶದಲ್ಲಿ ತೀವ್ರಗೊಂಡ ತನಿಖೆ.
ಬೆಳಗಾವಿ: ಬೆಳಗಾವಿ ನಗರದ ಕೈಗಾರಿಕಾ ಪ್ರದೇಶವಾದ ಉದ್ಯಮಬಾಗದಲ್ಲಿ ಪೌರಕಾರ್ಮಿಕರು ನಡೆಸುತ್ತಿದ್ದ ಕಸ ವಿಲೇವಾರಿ ಕಾರ್ಯದ ವೇಳೆ ಸ್ಪೋಟಕ ಸತ್ಯವೊಂದು ಬಯಲಾಗಿದೆ. ಕಸದ ರಾಶಿಯಲ್ಲಿ ಬರೋಬ್ಬರಿ 59 ಜೀವಂತ ಗುಂಡುಗಳು ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ.
ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಎಂದಿನಂತೆ ಉದ್ಯಮಬಾಗದ ರಸ್ತೆಯ ಬದಿಯಲ್ಲಿ ಸಂಗ್ರಹವಾದ ಕಸವನ್ನು ವಿಂಗಡಿಸುತ್ತಿದ್ದಾಗ, ಈ ಜೀವಂತ ಗುಂಡುಗಳು ಪತ್ತೆಯಾಗಿವೆ. ಅಪಾಯವನ್ನು ತಕ್ಷಣವೇ ಗ್ರಹಿಸಿದ ಕಾರ್ಮಿಕರು, ವಿಳಂಬ ಮಾಡದೆ ಉದ್ಯಮಬಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ನಿರೀಕ್ಷಕ ಮಹಾಂತೇಶ ಹೊಸಪೇಟೆ ಮತ್ತು ಅವರ ತಂಡವು, ಸ್ಥಳವನ್ನು ತಮ್ಮ ವಶಕ್ಕೆ ಪಡೆದು ಪರಿಶೀಲನೆ ನಡೆಸಿತು. ಒಂದು ವಶಪಡಿಸಿಕೊಳ್ಳಲಾದ ಒಟ್ಟು 59 ಗುಂಡುಗಳಲ್ಲಿ, 41 ಒಂದು ಮಾದರಿಚದರ ಮತ್ತು 18 ಮತ್ತೊಂದು ಮಾದರಿಯ ಗುಂಡುಗಳಾಗಿವೆ.
ಸದ್ಯ ಘಟನಾ ಸ್ಥಳದಕ್ಕೆ ಭೇಟಿ ನೀಡಿದ ಪಿಎಸ್ಐ ಪ್ರವೀಣ ಬಿರಾದಾರ ನೇತೃತ್ವದಲ್ಲಿ ಮಹಜರು ನಡೆಸಲಾಗಿದೆ. ಈ ಗುಂಡುಗಳು ಇಲ್ಲಿಗೆ ಹೇಗೆ ಬಂದವು? ಇವುಗಳನ್ನು ಕಸದ ತೊಟ್ಟಿಯಲ್ಲಿ ಬಿಸಾಡಿದವರು ಯಾರು? ಇವುಗಳ ಬಳಕೆ ಎಲ್ಲಿಯಾದರೂ ಆಗಿದೆಯೇ? ಎಂಬಿತ್ಯಾದಿ ಆಯಾಮಗಳಲ್ಲಿ ಉದ್ಯಮಬಾಗ ಪೊಲೀಸರು ತೀವ್ರ ತನಿಖೆಯನ್ನು ಕೈಗೊಂಡಿದ್ದಾರೆ. ಈ ಅನಿರೀಕ್ಷಿತ ಘಟನೆಯು ಸ್ಥಳೀಯರಲ್ಲಿ ಕಳವಳವನ್ನು ಉಂಟುಮಾಡಿದ್ದು, ಪೊಲೀಸರ ಮುಂದಿನ ವರದಿಗಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ.



