ಮೂರು ದಿನ ನಡೆಯಲಿದೆ ತುರಡಗಿ ತಿಮ್ಮಮ್ಮನವರ ಆರಾಧನೆ ಮಹೋತ್ಸವ

ಮುದಗಲ್ : ಪಟ್ಟಣ ಸಮೀಪದ ಹೂನೂರು ಗ್ರಾಮದ ಶ್ರೀ ಕ್ಷೇತ್ರ ಅಮ್ಮನಕಟ್ಟೆಯಲ್ಲಿ ಶ್ರೀ ಸಾಧ್ವ ಶಿರೋಮಣಿ ತುರಡಗಿ ತಿಮ್ಮಮ್ಮನವರ 212 ನೇ ಆರಾಧನೆ ಮಹೋತ್ಸವ ಇದೆ ಜನವರಿ 29,30,31 ರಂದು ನೆಡೆಲಿದೆ.
29 ಬುಧುವಾರ ರಂದು ಶ್ರೀ ಪುರಂದರದಾಸರ ಪುಣ್ಯಾರಾಧನೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ್, ಪೂಜೆ ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ, ದಾಸವಾಣಿ ಕಾರ್ಯಕ್ರಮ ನಡೆಲಿದೆ
30 ಗುರುವಾರ ರಂದು ಶ್ರೀ ಸಾದ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ ಆರಾಧನೆ ಮಹೋತ್ಸವ, ಸಾಮೂಹಿಕ ಜವಳ, ಉಪನಯನ, ಉಚಿತ ವಿವಾಹ, ವಿವಧ ವ್ಯಾಧ್ಯಗಳಿಂದ ತುರಡಗಿ ಗ್ರಾಮದಿಂದ ಅಮ್ಮನವರನ್ನು ಅಮ್ಮನಕಟ್ಟೆಗೆ ಕರೆದುಕೊಂಡು ಬರುವದು, ಸಂಗೀತ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರುಗಳಿಗೆ ಸನ್ಮಾನ ಕಾರ್ಯಕ್ರಮ ದಾಸವಾಣಿ ಕಾರ್ಯಕ್ರಮ, ವಿವಿಧ ಭಜನಾಮಂಡಳಿಗಳೊಂದಿಗೆ ವೈಭವದಿಂದ ಹೂನೂರು ಗ್ರಾಮಕ್ಕೆ ಅಮ್ಮನವರನ್ನು ಕಳಿಸುವದು 31 ಶುಕ್ರವಾರ ರಂದು ಸತ್ಯನಾರಾಯಣ ಪೂಜೆ ಸೇರಿದಂತೆ ವಿಶೇಷ ಮಹಾಪೂಜೆ ನಡೆಯಲಿದೆ
ಗೊಂಬಿ ಆಸ್ಪತೆಯ ವೈದ್ಯಧಿಕಾರಿಗಳ ತಂಡದಿಂದ ಮಹಿಯರಿಗೆ ಹಾಗ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ
ಈ ವೇಳೆ ವೇ ಮೋ ಭುಜರಂಗಭಟ್ಟರಿಗೆ ಎಂ ಸಿ ಸೂಡಿ, ಕೊಪ್ಪಳ ಸಂಸದ ರಾಜಶೇಖರ ಹಿನ್ನಾಳ, ರಾಯಚೂರು ಸಂಸದ ಕುಮಾರ ನಾಯ್ಕ್, ಮಾಜಿ ಸಂಸದ ಸಂಗಣ್ಣ ಕರಡಿ ಮಾಜಿ ಸಚಿವ ಅಮರೇಗೌಡ ಬಯ್ಯಾಪೂರು, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್, ಮಾಜಿ ಶಾಸಕ ಹೂಲಗೇರಿ, ನಿವೃತ್ತ ಪೊಲೀಸ್ ಅಧಿಕಾರಿ ಕಾಶೀನಾಥರಾವ್ ಉದ್ದಬಾಳ, ಮಾಜಿ ಸೈನಿಕ ಅನಂತದರಾವ ಕುಲಕರ್ಣಿ, ವೆಂಕಣ್ಣ ಜೋಶಿ ದೋಟಿಹಾಳ, ಅನಿಲ್ ಟಿ, ಜೋಶಿ ರವರಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು.