
ಬೆಂಗಳೂರು, ಫೆಬ್ರವರಿ 4: ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರ್ ಶೋ ಕಾರಣದಿಂದಾಗಿ ಬೆಂಗಳೂರು ನಗರದಲ್ಲಿ ಮತ್ತು ಏರ್ ನಡೆಯುವ ಸುತ್ತಮುತ್ತಲಿನ ಪ್ರದೇಶದಲ್ಲಿ ರೂಮ್ಸ್ ಬಾಡಿಗೆ ಸಿಗದಂತಾಗಿದೆ. ರೂಮ್ಸ್ ಬೇಕು ಅಂದರೆ ದುಪ್ಪಟ್ಟು ಹಣ ಕೊಡಲೇಬೇಕು. ಏರ್ ಶೋ ಹೆಸರಲ್ಲಿ ಓನ್ ಟು ಡಬಲ್ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಏರ್ ಶೋ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ರೂಮ್ಸ್, ಟ್ಯಾಕ್ಸಿ, ಕ್ಯಾಬ್ಸ್ ಬುಕ್ಕಿಂಗ್ ಜೋರಾಗಿದೆ. ಫೆಬ್ರವರಿ 10 ರಿಂದ 14 ರ ವರೆಗೆ ಏರ್ ಶೋ ನಡೆಯಲಿದ್ದು, ನಗರದ ಹೆಚ್ಚಿನ ಫೈ ಸ್ಟಾರ್, ಥ್ರೀ ಸ್ಟಾರ್ ಸೇರಿದಂತೆ ಬಹುತೇಕ ಹೋಟೆಲ್ಗಳು, ಲಾಡ್ಜ್ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ.
ಬೇರೆ ರಾಜ್ಯಗಳಿಂದಲೂ ಬರಲಿವೆ ಕ್ಯಾಬ್ಗಳು!
ಏರ್ ಶೋ ವೀಕ್ಷಣೆಗೆ, ವಿದೇಶಗಳಿಂದ ಜನರು ಆಗಮಿಸಲಿದ್ದು, ಟ್ರಾವೆಲ್ಸ್ಗಳ ಬಳಿ ಇರುವ ಬಿಎಂಡಬ್ಲೂ, ಆಡಿ, ಬೆನ್ಜ್ ಸೇರಿದಂತೆ ಎಲ್ಲಾ ಮಾದರಿಯ ಕಾರುಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಏರ್ ಶೋ ನಡೆಯುವ ಐದು ದಿನಗಳ ಕಾಲ ನಗರದಲ್ಲಿ ರೂಮ್ಸ್, ಕ್ಯಾಬ್ ಸಿಗುವುದು ಕಷ್ಟಕರವಾಗಿದೆ. ಈ ಬಗ್ಗೆ ಆರೆಂಜ್ ಟ್ರಾವೆಲ್ಸ್ ಮಾಲೀಕ ಪ್ರಶಾಂತ್ ಪ್ರತಿಕ್ರಿಯಿಸಿದ್ದು, ನಮ್ಮ ಮತ್ತು ನಮ್ಮ ಸ್ನೇಹಿತರ ಎಲ್ಲಾ ಟ್ರಾವೆಲ್ಸ್ಗಳಲ್ಲೂ ಕಾರುಗಳು ಬುಕ್ಕಿಂಗ್ ಆಗಿವೆ. ಬೇರೆ ರಾಜ್ಯದಿಂದ ಕ್ಯಾಬ್ಗಳನ್ನು ಕರೆಸಿಕೊಂಡು ಕ್ಯಾಬ್ ಸೇವೆ ಒದಗಿಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.