
ತಾಳಿಕೋಟಿ ಆನೆಕಾಲು ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ವರ್ಷದಲ್ಲಿ ಒಂದು ಬಾರಿ ಡಿಇಸಿ ಅಲ್ಬೆಂಡಜೋಲ್ ಗುಳಿಗೆಗಳ ಸೇವನೆಯಿಂದ ಆನೆಕಾಲು ರೋಗ ವಾಸಿಯಾಗುತ್ತದೆ ಎಂದು ಪಿ ಎಚ್ ಸಿ ಓ , ಎಮ್ಎಚ್ ಟಕ್ಕಳಗಿ ತಿಳಿಸಿದರು.
ತಾಳಿಕೋಟಿ ತಾಲ್ಲೂಕಿನ ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಪಟ್ಟಣದಲ್ಲಿ ಆನೆಕಾಲು ರೋಗ ನಿವಾರಣೆಗಾಗಿ ಮನೆ ಮನೆಗೆ ತೆರಳಿ ಔಷಧಿ ವಿತರಣೆ ಮಾಡಲಾಯಿತು,
ತಾಳಿಕೋಟಿ ಪಟ್ಟಣದಲ್ಲಿ 32,878 ಜನಸಂಖ್ಯಾ ಇದೆ 57 ಸ್ಕೂಲ್ ಗಳು ಹಾಗೂ 11 ಕಾಲೇಜ್ ಗಳ ಇದ್ದ ಕಾರಣ ಎಲ್ಲರೂ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆನೆಕಾಲು ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ಡಿಇಸಿ, ಜೊತೆ ಅಲ್ಬೆಂಡೆಜೋಲ್ ಎಂಬ ಮಾತ್ರೆ ನೀಡಲಾಗುತ್ತಿದ್ದು, ಈ ಮಾತ್ರೆ ಚಪ್ಪರಿಸಬೇಕು. ಇದರಿಂದ ದೇಹದಲ್ಲಿರುವ ಎಲ್ಲ ತರಹದ ಜಂತುಗಳು ನಾಶ ಹೊಂದುವುದಲ್ಲದೆ ರಕ್ತದ ಪ್ರಮಾಣ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದರು.
ಮಾತ್ರೆಗಳನ್ನು ಎರಡು ವರ್ಷ ಒಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ದೀರ್ಘಕಾಲದ ತೀವ್ರ ರೋಗಗಳಾದ ಕಿಡ್ನಿ ತೊಂದರೆ, ಅತಿ ಸಿಹಿಮೂತ್ರ ರೋಗ, ಅತಿ ರಕ್ತದೊತ್ತಡ ಇರುವಂತಹ ರೋಗಿಗಳು ತೆಗೆದುಕೊಳ್ಳಬಾರದು. 2 ರಿಂದ 5 ವರ್ಷದವರಿಗೆ 100 ಎಂ ಜಿ 1 ಡಿಇಸಿ ಹಾಗೂ 400 ಎಂ ಜಿ ಅಲ್ಬೆಂಡಜೋಲ್ ,6 ರಿಂದ 14 ವರ್ಷದವರಿಗೆ 100 ಎಂ ಜಿ 2 ಡಿಇಸಿ 400 ಎಂ ಜಿ 1 ಅಲ್ಬೆಂಡಜೋಲ್, 15 ವರ್ಷದ ಮೇಲ್ಪಟ್ಟವರಿಗೆ 100 ಎಂ ಜಿ 3 ಡಿಇಸಿ 400 ಎಂ ಜಿ 1 ಅಲ್ಬೆಂಡಜೋಲ್, ಈ ಮಾತ್ರೆಗಳನ್ನು ಖಾಲಿ ಹೊಟ್ಟೆಯಿಂದ ಮಾತ್ರೆ ಸೇವಿಸದೆ ಊಟ ಉಪಹಾರ ಸೇವನೆಯ ನಂತರ ಈ ಮಾತ್ರೆ ಸೇವಿಸಬೇಕು ಎಂದು ತಿಳಿಸಿದರು.
ಈ ಮಾತ್ರೆಗಳನ್ನು ನುಂಗಿದರೆ ಆರೋಗ್ಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆಂದು ಕೆಲವರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಇದರಿಂದಾಗಿ ಮೊದಲು ನಾವು ಹೊರ ಬರುವುದು ಅವಶ್ಯವಿದೆ ಎಂದರು.
ಶಾಲಾ ವಿದ್ಯಾರ್ಥಿಗಳು ಈ ರೋಗದ ಬಗ್ಗೆ ಜನ ಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವುದರ ಜತೆಗೆ ಡಿಇಸಿ ಮಾತ್ರೆಗಳನ್ನು ಸೇವಿಸಲು ಪ್ರೆರೇಪಿಸಿ ಆನೆಕಾಲು ರೋಗ ನಿರ್ಮೂಲನೆ ಮಾಡಲು ಶ್ರಮಿಸಿಬೇಕು ಎಂದು ಹೇಳಿದರು.
ಈ ವೇಳೆ ಎನ್ಎಚ್ ಬೋರಗಿ, ವಿಜಯಲಕ್ಷ್ಮಿ ಲಾಹೋರ್ಕರ್ , ಪದ್ಮ ನಾಗಕರಣಿ , ವಿಶಾಲತಾ ಕೊಡೆಕಲ್, ಸೌಂದರ್ಯ ನಾಡಿಕರ್, ಜೈ ಶ್ರೀ ಹಿರೇಮಠ, ಹಿರಾಬಾಯಿ ಗಾಯಕವಾಡ್, ಜೈಬುನ ಬಿ ಮಕಾಂದಾರ್, ವಿದ್ಯಾವತಿ ಬೂದಿಹಾಳ, ಸವಿತಾ ಹಜೇರಿ,
ಇದ್ದರು.