
ಮಾನ್ವಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪುಟ್ಟ ಕಂದಮ್ಮಗಳಿಗೆ ಕಚ್ಚುತ್ತೀರುವುದರಿಂದ ಮಾನ್ವಿಯ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ ಬೌ ಬೌ ನಾಯಿಗಳ ಕಡಿತಕ್ಕೆ ಜನ ರೋಸಿ ಹೋಗಿದ್ದು,
ಪುರಸಭೆಯ ಆಧಿಕಾರಿಗಳು ಹಾಗೂ ಜನ ಪ್ರತಿನಿಧಿ ತಮ್ಮ ಜವಾಬ್ದಾರಿ ಮರೆತಿರುವುದು ಈ ಪ್ರಕಣಕ್ಕೆ ಸಾಕ್ಷಿಯಾಗಿದೆ.
ಮಾನವಿ ಪುರಸಭೆಯ ನೈರ್ಮಲ್ಯ ನಿರೀಕ್ಷಕ ಮಹೇಶಪ್ಪ ಕಣ್ಣಿದ್ದು ಕುರುಡರಾಗಿದ್ದಾರೆ.
ಪಟ್ಟಣದಲ್ಲಿ ರಾತ್ರಿಯಾದರೆ ಸಾಕು ಹಿಂಡು ಹಿಂಡಾಗಿ ನಾಯಿಗಳು ಮಕ್ಕಳ ಮೇಲೆ ಎರಗುತ್ತಿದ್ದು, 6 ವರ್ಷದ ಪುಟ್ಟ ಕಂದಮ್ಮಳ ಮೇಲೆ ನಾಯಿ ದಾಳಿ ಮಾಡಿದ್ದರಿಂದ ಆಯೇಷಾ ಎಂಬ ಬಾಲಕಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾಳೆ
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಶರಣಪ್ಪ ಮಾಧ್ಯಮ ದವರಿಗೆ ಪುರಸಭೆಯ ನೈರ್ಮಲ್ಯ ನಿರೀಕ್ಷಕ ಮಹೇಶಪ್ಪರಿಗೆ ನಾವು ತಿಳಿಸಿದರು ಸಹ ನಿಯಂತ್ರಣ ಮಾಡುವಲ್ಲಿ ಮೌನತಾಳಿದ್ದಾರೆಂದು ಹೇಳಿದ್ದಾರೆ
ಪುರಸಭೆಯ ನೈರ್ಮಲ್ಯ ನಿರೀಕ್ಷಕ ಮಹೇಶಪ್ಪ ಪಟ್ಟಣ ಸಾರ್ವಜನಿಕರ ಆರೋಗ್ಯ ಕಾಪಾಡುವುದು ನಿಮ್ಮ ಕರ್ತವ್ಯ ಬೀದಿ ನಾಯಿಗಳ ಹವಾಳಿ ಹೆಚ್ಚಾಗದಂತೆ ನೋಡಿಕೊಳ್ಳುಬೇಕು
ಬೀದಿ ನಾಯಿಗಳ ಕಡಿತ ದಿಂದ ಮಕ್ಕಳ ಜೀವ ಹಾನಿಯಾದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಆಯೇಷಾ ಬಹು ಬೇಗನೆ ಚೇತರಿಸಿಕೊಳ್ಳಲಿ ಹತ್ತವರು ಇಂತವ
ಘಟನೆಗಳು ನಡೆಯದಂತೆ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ
ವಹಿಸಿಲಿ ಎನ್ನುವುದು ಸುವರ್ಣ ಜನನಿಯ ಅಪೇಕ್ಷೆ ಯಾಗಿದೆ.
ವರದಿ :ಸುಪ್ರಿಯಕುಮಾರ್ ಕುಮ್ದಾಳ್