
ರಾಜು ಕಾಗೆ 2028ರಲ್ಲಿ ಮತ್ತೆ ಶಾಸಕರಾಗಲಿ; ಕುಂಭಮೇಳದಲ್ಲಿ ಹರಿಕೆ ಹೊತ್ತ ಅಭಿಮಾನಿಗಳು…!!
ಕಾಗವಾಡ ಶಾಸಕರಾದ ರಾಜು ಕಾಗೆ ಅವರು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆ ಆಗಲೆಂದು ಅವರು ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.
ಸದ್ಯ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋದ ಶಾಸಕ ರಾಜು ಕಾಗೆಯವರ ಅಭಿಮಾನಿಗಳು ಐತಿಹಾಸಿಕ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಪವಿತ್ರ ಸಂಗಮದಲ್ಲಿ ರಾಜು ಕಾಗೆ ಅವರ ಭಾವಚಿತ್ರಕ್ಕೆ ಪುಣ್ಯ ಸ್ನಾನ ಮಾಡಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.