ಯತ್ನಾಳರಿಗೆ ಹೆಚ್ಚುತ್ತಿರುವ ಫ್ಯಾನ್ ಫಾಲೋವರ್ಸ್
ಶಾಸಕ ಯತ್ನಾಳರಿಗೆ ಹೆಚ್ಚುತ್ತಿರುವ ಫ್ಯಾನ್ ಫಾಲೋವರ್ಸ್: ಬೆಂಕಿ ಬಬಲಾದಿಗೆ ಹರಕೆ ಹೊತ್ತ ಶಾಸಕ ಯತ್ನಾಳರ ಅಭಿಮಾನಿ

ರಾಜ್ಯ ಬಿಜೆಪಿಯಲ್ಲಿ ಬಿಜೆಪಿ ಬಣದ ಬಡಿದಾಟ ಜೊರಾಗಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ತಿಕ್ಕಾಟ ರಾಜ್ಯದ ಗಮನ ಸೆಳೆದಿದೆ. ಇತ್ತ ಶಾಸಕ ಯತ್ನಾಳರ ಪ್ಯಾನ್ ಫಾಲೋವರ್ಸ್ ಜಾಸ್ತಿಯಾಗುತ್ತಲೇ ಇದ್ದಾರೆ. ಇತ್ತಿಚೆಗೆ ಕುಂಭಮೇಳದಲ್ಲಿ ಶಾಸಕ ಯತ್ನಾಳ ಸಿಎಂ ಆಗಲಿ ಎಂದು ಹರಕೆ ಹೊತ್ತು ಘೋಷಣೆ ಹಾಕಿದ್ದರು.
ಇದೀಗ ಶಾಸಕ ಯತ್ನಾಳರ ಅಭಿಮಾನಿಯೊರ್ವ ಯತ್ನಾಳರು ಸಿಎಂ ಅಗಲಿ ಎಂದು ಉತ್ತರ ಕರ್ನಾಟಕದ ಪ್ರಸಿದ್ದ ಕಾರ್ಣಿಕ ಮಠವಾಗಿರುಬ ಬೆಂಕಿ ಬಬಲಾದಿಗೆ ಪಾದಯಾತ್ರೆ ಮಾಡಿದ್ದಾನೆ. ಮಾಜಿ ಕೇಂದ್ರ ಸಚಿವರು, ಶಾಸಕ ಬಸನಗೌಡ ಪಾಟೀಲ ಯತ್ನಾಳರವರು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿ ಎಂದು ಅಭಿಮಾನಿಯಾಗಿರುವ ಮಲ್ಲು ಹಳಕಿ ರವರು ವಿಜಯಪುರ ಜಿಲ್ಲೆಯ, ಚಡಚಣ ತಾಲೂಕಿನ, ಗೋಟ್ಯಾಳ ಗ್ರಾಮದಿಂದ ವಿಜಯಪುರ ಜಿಲ್ಲೆಯ, ಬಬಲೇಶ್ವರ ತಾಲೂಕಿನ, ಬಬಲಾದಿ ಗ್ರಾಮದ ಆರಾಧ್ಯ ದೈವ, ತ್ರಿಕಾಲ ಜ್ಞಾನಿ ಸದಾಶಿವ ಮೂತ್ಯಾನ ದರ್ಶನಕ್ಕೆ ಯತ್ನಾಳಜಿ ರವರ ಭಾವಚಿತ್ರ ದೊಂದಿದೆ ಪಾದಯಾತ್ರೆ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಬಬಲೇಶ್ವರ ಬಿಜೆಪಿ ಸೋಶಿಯಲ್ ಮಿಡಿಯಾದ ಬಬಲೇಶ್ವರ ಸಹ ಸಂಚಾಲಕ ಸಂಜಯ ಅರ್ಜುಣಗಿ ಸನ್ಮಾನಿಸಿದರು. ಹಾಗೂ ವಿಜಯಪುರ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಅಭಿನಂಧಿಸಿದರು.