
ಧಾರವಾಡದ ಕಲಘಟಗಿಯಲ್ಲಿ ಬಾಡಿಗೆ ತುಂಬದ ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು.. ಭರ್ಜರಿ ವ್ಯಾಪಾರ ಮೂಡನಲ್ಲಿದ್ದ ಬಾಡಿಗೆದಾರರಿಗೆ ಶಾಕ್ ನೀಡಿದ ಅಧಿಕಾರಿಗಳು…
ಅಂಗಡಿ ಬಾಡಿಗೆ ಕಟ್ಟುತ್ತೇವೆ ಎಂದು ಶಾಪಗಳನ್ನು ಬಾಡಿಗೆ ಪಡೆದು ಬಾಡಿಗೆ ಪಾವತಿ ಮಾಡದ ಅಂಗಡಿಕಾರರಿಗೆ ಧಾರವಾಡದ ಕಲಘಟಗಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಬೀಗ್ ಜಡಿಯುವ ಮೂಲಕ ವ್ಯಾಪಾರಸ್ಥರಿಗೆ ಶಾಕ್ ನೀಡಿದರು.
ಕಲಘಟಗಿ ಪಟ್ಟಣದಲ್ಲಿ ಇರುವ ಪಟ್ಟಣ ಪಂಚಾಯತ್ ವಾಣಿಜ್ಯ ಮಳಗಿಗಳನ್ನು ವ್ಯಾಪಾರಸ್ಥರಿಗೆ ಬಾಡಿಗೆ ನೀಡಲಾಗಿತ್ತು. ಆದರೆ ಬಾಡಿಗೆದಾರರು ಬಾಡಿಗೆ ಪಾವತಿ ಮಾಡದೆ ಮೊಂಡತನ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ಪಟ್ಟಣ ಪಂಚಾಯತಿಗೆ ಬಾಡಿಗೆ ನೀಡದೆ ವಂಚಿಸುತ್ತಿದ್ದ ಅಂಗಡಿಗಳ ವಿರುದ್ಧ ಕಾರ್ಯಾಚರಣೆ ಮಾಡಿದ ಅಧಿಕಾರೊಗಳು,
ಬೀಗ್ ಹಾಕಿ ಬಾಡಿಗೆ ಮೊತ್ತ ಪಾವತಿಸಲುಖಡಕ್ ವಾರ್ನಿಂಗ್ ನೀಡಲಾಯಿತು. ಜತೆಗೆ ಬೀಗ್ ಹಾಕುವ ಮುನ್ನ ಬಾಡಿಗೆ ಮೊತ್ತಕ್ಕಾಗಿ ಅಂಗಡಿಕಾರರಿಗೆ ಹಲವಾರು ಬಾರಿ ನೋಟೀಸ್ ನೀಡಿಲಾಗಿದೆ. ಬಾಡಿಗೆ ಕಟ್ಟದೆ ಇರುವುದರಿಂದ ಇಂದು ಮಧ್ಯಾಹ್ನ ಪಟ್ಟಣ ಪಂಚಾಯತ್ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾದ ಶಿವಲೀಲಾ ಎಂ ನೇತೃತ್ವದಲ್ಲಿ ಕಾರ್ಯಚಾರಣೆ ಕೈಗೊಂಡು ಬೀಸಿ ಮುಟ್ಟಿಸಲಾಯಿತ್ತು