
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಲಾಡ್ ಕಿಡಿ.ಗೃಹ ಲಕ್ಷ್ಮಿ ಹಣ ವಿಳಂಬಕ್ಕೆ ಕಾಂಗ್ರೆಸ್ ನವರಿಗೆ ದಪ್ಪು ಚರ್ಮ ಇದೆ ಎಂಬ ಜೋಶಿ ಹೇಳಿಕೆಗೆ ಲಾಡ್ ತಿರುಗೇಟು
– ಕೇಂದ್ರ ಸರಕಾರದಿಂದ 11 ಬಜೆಟ್ ಮಂಡನೆಯಾಗಿವೆ. ಜೋಶಿಯವರು ಕರ್ನಾಟಕಕ್ಕೆ ಧಾರವಾಡ ಜಿಲ್ಲೆಗೆ ಕೇಂದ್ರದಿಂದ ಎನೂ ಅನುದಾನ ತಂದಿದ್ದಾರೆ..?, ಇದರ ಬಗ್ಗೆ ಅವರು ಬಹಿರಂಗ ಚರ್ಚೆಗೆ ಬರಲಿ. ನಾನು ಕೂಡಾ ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿದರು.
ಧಾರವಾಡದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮಿ ಹಣ ವಿಳಂಬ ಕಾಂಗ್ರೆಸ್ ನವರಿಗೆ ದಪ್ಪು ಚರ್ಮ ಇದೆ, ಸರ್ಕಾರ ದಿವಾಳಿ ಆಗಿದೆ ಎಂದು ಜೋಶಿ ಅವರು ಹೇಳ್ತಾರೆ ಅದನ್ನ ಆಮೇಲೆ ವಿಚಾರ ಮಾಡೋಣ. ಕೇಂದ್ರ ಸರಕಾರ ಎನಾಗಿದೆ ಎಂಬುದನ್ನ ಅವರು ಹೇಳ್ತಾರಾ..?. ಅವರು ರಾಜ್ಯದವರಿದ್ದಾರೆ ಪ್ರತಿಸಾರಿ ರಾಜ್ಯ ಸರಕಾರಕ್ಕೆ ಅಟ್ಯಾಕ್ ಮಾಡಿ ಹೋಗ್ತಾರೆ ಅಲ್ವಾ..?, ಎರಡು ತಿಂಗಳು ದುಡ್ಡು ಹಾಕಿಲ್ಲ ಅಂದ್ರೆ ದಿವಾಳಿ ಆಗಿದೆ ಸರಕಾರ ಎಂದು ಅವರು ಹೇಳುವುದು ಸರಿಯಲ್ಲ. ಇದೇ ಜೋಶಿಯವರು ಕೇಂದ್ರ ಸರ್ಕಾರದ ಕೊಡುಗೆಗಳ ಬಗ್ಗೆ ಚರ್ಚೆ ಮಾಡ್ತಾರಾ..?. ನಾವು ಎನನ್ನ ಹೇಳಿದ್ದೆವೆ ಎನನ್ನ ಮಾಡಿಲ್ಲ,