ಬಾರ್ ಬಂದ್ ವಿಷಯ ದಂಡಾಧಿಕಾರಿಗಳ ಸಭೆಯಲ್ಲಿ ಮಹಿಳೆಯರ ಆಕ್ರೋಶ.

ಮಹಿಳಾ ದಿನಾಚರಣೆ ದಿನದಂದು ಪ್ರಾರಂಭವಾದ ವೈನ್ ಶಾಪ್ ಬಂದ್ ಪ್ರತಿಭಟನೆ ವಿಷಯವಾಗಿ ಹುಕ್ಕೇರಿ ತಾಲೂಕ ದಂಡಾಧಿಕಾರಿಗಳು ಇಂದು ಅಮ್ಮಣಗಿ ಗ್ರಾಮದ ಸಭೆ ಕರೆದು ತಮ್ಮ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಯತು.
ಪ್ರತಿಭಟನೆ ಮಹಿಳೆಯರ ಒಮ್ಮತದ ನಿರ್ಧಾರಕ್ಕೆ ಬೆಲೆ ಕೊಡದ ಅಧಿಕಾರಿಗಳು ನಮ್ಮ ಗ್ರಾಮದಲ್ಲಿ ಈ ವೈನ್ ಶಾಪ್ ಬೇಡವೆ ಬೇಡ ಎಂದು ಅಧಿಕಾರಿಗಳಿಗೆ ಕೈಮುಗಿದು ಪರಿಪರಿಯಾಗಿ ಬೇಡಿಕೊಂಡರು ಸರಕಾರದ ಆದಾಯವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ನೊಂದ ಬೆಂದ ಬಡ ಮಹಿಳೆಯರ ಕಡೆ ಸ್ಪಂದಿಸುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ ಒಂದು ವೇಳೆ ಬಾರ್ ಓಪನ್ ಮಾಡಿದ್ದೆ
ಆದಲ್ಲಿ ನಮ್ಮ ಜೀವಗಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಈ ಸಂಬಂಧಪಟ್ಟ ಅಧಿಕಾರಿಗಳೇ ಕಾರಣ ಎಂದು ಈ ಸಭೆಯಲ್ಲಿ ಉಗ್ರವಾಗಿ ಮಾತನಾಡಿದ ಮಹಿಳೆಯರುಈ ವೇಳೆಯಲ್ಲಿ ಎದ್ದುನಿಂತು ಮಾತಾಡಿದ ಮಹಿಳೆಯರ ಕಡೆ ಅಬಕಾರಿ ಅಧಿಕಾರಿ ತಮ್ಮ ಕಣ್ಣು ಸೊನ್ನೆಯ ಮೂಲಕ ಗದ್ದರಿಸುವ ಪ್ರಯತ್ನ ಪಟ್ಟರು ಮತ್ತು ಬಾರ್ ಮಾಲೀಕನ ಕಡೆ ತಮ್ಮ ಕಣ್ಣು ಸೊನ್ನೆ ಇಂದ ನಮ್ಮನ್ನು ತೋರಿಸುವ ಪ್ರಯತ್ನ ನಡೆಯಿತು
ಈ ಸಭೆಯಲ್ಲಿ ಎಂದು ಮಹಿಳೆಯರು ಆರೋಪಿಸಿದ್ದಾರೆಈ ಸಭೆಯಿಂದ ನಮಗೆ ಯಾವುದೇ ರೀತಿಯ ನ್ಯಾಯ ಸಿಗುವುದಿಲ್ಲ ಎಂದು ಮನವರಿಕೆ ಮಾಡಿಕೊಂಡ ಮಹಿಳೆಯರು ನಿರಾಶೆಯಿಂದ ಸಭೆಯಿಂದ ಹೊರಗೆ ಎದ್ದು ಹೋದರು ಈಗ ಮುಂದಿನ ಉಗ್ರವಾದ ನಿರ್ಧಾರಕ್ಕೆ ನಾಂದಿ ಹಾಡಿದ್ದಾರೆ ಪ್ರತಿಭಟನಾಕಾರರು