
ಹುಕ್ಕೇರಿ. ಪುರಸಭೆ ಅಧಿಕಾರಿಗಳನ್ನು ಪತ್ರಕರ್ತರು ಭೇಟಿ ಮಾಡಿ ಪ್ರಶ್ನೆ ಕೇಳಿದರೆ ಕುರ್ಚಿ ಬಿಟ್ಟು ಪರಾರಿ ಪುರಸಭೆಯಲ್ಲಿ ಸಾಕಷ್ಟು ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಿಕ್ಕೆ ಪತ್ರಕರ್ತರು ಪ್ರಯತ್ನ ಪಟ್ಟರೆ ಸರಿಯಾಗಿ ಸ್ಪಂದಿಸದ ಮುಖ್ಯ ಅಧಿಕಾರಿ ಈಶ್ವರ ಸಿದ್ನಾಳ ಪತ್ರಕರ್ತರು ಅಷ್ಟೇ ಅಲ್ಲ ಸಾರ್ವಜನಿಕರು ಕೂಡ ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ
ಈ ಪುರಸಭೆಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಮುಂದಕ್ಕೆ ಸಾಗುವುದಿಲ್ಲ ದುಡ್ಡು ಕೊಟ್ಟರೆ ಸಾಕು ಒಂದೇ ದಿನದಲ್ಲಿ ಉತಾರ ಒದಗಿಸುತ್ತಾರೆ ಒಂದು ವೇಳೆ ದುಡ್ಡು ಕೊಡಲಿಲ್ಲವೇ ನಿಮ್ಮ ಕೆಲಸ ಒಂದು ವರ್ಷನೂ ಆಗಬಹುದು ಅಥವಾ ಎರಡನೇ ವರ್ಷದಲ್ಲಿ ಆಗಬಹುದು ಒಂದು ಸಣ್ಣ ಕೆಲಸಕ್ಕೆ ಸಾವಿರ ಪ್ರಶ್ನೆ ಇವರ ಪ್ರಶ್ನೆಗಳಿಗೆ ಇವರ ವರ್ತನೆಗಳಿಗೆ ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಇವರಿಗೆ ದುಡ್ಡು ಒಂದು ಕೊಟ್ಟರೆ ಸಾಕು ಸರ್ಕಾರದ ಆದೇಶ ಹಾಗೂ ನಿಯಮಾವಳಿಗಳನ್ನು ಗಾಳಿಗೆ ತೂರಿ ಆದರೂ ಕೆಲಸ ಗ್ಯಾರಂಟಿ
ಸರ್ಕಾರದ ಆದೇಶದಂತೆ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ವಾಸ ಮಾಡಬೇಕು ಆದರೆ ಈ ಅಧಿಕಾರಿಗಳು ಇಲ್ಲಿ ಇರುವುದಿಲ್ಲ ಈಗ ಹಳದಕೇರಿ ಹತ್ತಿರ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಸಾಕಷ್ಟು ನೀರು ನಡು ರಸ್ತೆಯಲ್ಲಿ ಪೋಲಾಗುತ್ತಿದೆ ಒಬ್ಬ ಅಧಿಕಾರಿಯೂ ಕೂಡ ಈ ಕಡೆ ಸುಳಿಯಲೇ ಇಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ನೋಡೋಣ ಮುಂದಿನ ದಿನಮಾನಗಳಲ್ಲಿ ಈ ಅಧಿಕಾರಿಗಳ ಮುಂದಿನ ಬದಲಾವಣೆ ಏನು ❓
ಮುಂದುವರೆಯಲಿದೆ….