ಕೂಡಲ ಸಂಗಮ ಶ್ರೀಗಳ ನಿರ್ಧಾರಕ್ಕೆ ಬಿಜೆಪಿ ಮುಖಂಡ ರವಿ ಖಾನಾಪುರ ಖಂಡನೆ

ಕೂಡಲ ಸಂಗಮ ಶ್ರೀಗಳ ನಿರ್ಧಾರಕ್ಕೆ ಬಿಜೆಪಿ ಮುಖಂಡ ರವಿ ಖಾನಾಪುರ ಖಂಡನೆ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಘಟಕದ ಶಿಸ್ತು ಸಮಿತಿ ಅವರ ಕಳೆದ ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ನಡೆದುಕೊಂಡು ಬಂದ ಎಲ್ಲ ನಡೆ-ನುಡಿಗಳನ್ನು ನೋಡಿ ಅದಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ಅನ್ನು ಕೂಡ ಶಿಸ್ತು ಸಮಿತಿ ನೀಡಿತ್ತು.
ಅದರ ಹೊರತಾಗಿಯೂ ಅವರ ಎಲ್ಲ ನಡವಳಿಕೆಗಳನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿ ರಾಷ್ಟ್ರೀಯ ಸಮಿತಿ ಹಾಗೂ ರಾಷ್ಟ್ರೀಯ ನಾಯಕರು ಕರ್ನಾಟಕ ಭಾರತೀಯ ಜನತಾ ಪಕ್ಷದ ಹಿತ ದೃಷ್ಟಿಯ ಅನುಗುಣವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭಾರತೀಯ ಜನತಾ ಪಕ್ಷದಿಂದ ಆರು ವರ್ಷಗಳ ಕಾಲ ಅವರ ಪ್ರಾಥಮಿಕ ಸದಸ್ಯತ್ವವನ್ನು ಮೊಟಕುಗೊಳಿಸಿ ಉಚ್ಚಾಟನೆಯನ್ನು ಮಾಡಲಾಗಿದೆ ಎಂದು ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡ ರವಿ ಖಾನಾಪುರ ಇವರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಮೂಲಕ ಇದರಲ್ಲಿ ಕರ್ನಾಟಕ ರಾಜ್ಯದ ಯಾವುದೇ ಒಬ್ಬ ನಾಯಕರ ಒತ್ತಡವು ಇಲ್ಲ ಹಾಗೆ ಒಂದು ವೇಳೆ ರಾಜ್ಯದ ಅಧ್ಯಕ್ಷರಾಗಲಿ ಅಥವಾ ರಾಜ್ಯ ಭಾಜಪ ಸರ್ವೋಚ್ಚ ನಾಯಕ ಯಡಿಯೂರಪ್ಪನವರಾಗಲಿ ಪದೇಪದೇ ದೂರನ್ನು ದಾಖಲಿಸಿದ್ದರೆ ಅಥವಾ ದೂರನ್ನು ನೀಡಿದ್ದರೆ ಎಂದೋ ಇವರನ್ನು ಹೊರಗೆ ಹಾಕುತ್ತಿದ್ದರು. ಆದರೆ ಅವರು ಅದನ್ನು ಮಾಡಿಲ್ಲ ಇನ್ನೊಂದು ವಿಷಯ ಗೊತ್ತಿರಲಿ ಇಡೀ ರಾಷ್ಟ್ರದಲ್ಲಿ ಯತ್ನಾಳರಿಗೆ ಬದಲಾವಣೆಯಾಗಲು ಕೊಟ್ಟಷ್ಟು ಅವಕಾಶ ಯಾರಿಗೂ ಕೊಟ್ಟಿಲ್ಲಾ
ಎಂದು ರವಿ ಖಾನಾಪುರ ತಿಳಿಸಿದ್ದಾರೆ.
ಯತ್ಬಾಳ ಅವರು ಮಾಡುವ ಆರೋಪಗಳು ಯಾವದು ಕೂಡಾ ಸತ್ಯಕ್ಕೆ ಸಮೀಪವಿಲ್ಲಾ, ಕೇವಲ ತಮ್ಮ ವಯಕ್ತಿಕ ಹಿತಾಸಕ್ತಿಗಾಗಿ ಪದೇ ಪದೇ ಯಡಿಯೂರಪ್ಪನವರ ಮೇಲೆ ವಿಜಯೇಂದ್ರ ಅವರ ಮೇಲೆ ಸೇಡಿನ ಮಾತು ಆಡಿದ್ದಾರೆ ಹೊರತು ಪಕ್ಷ ಬಲಪಡಿಸುವ ಯಾವ ಉದ್ದೇಶವು ಅವರಲ್ಲಿ ಇಲ್ಲಾ. ಕಾರಣ ಅವರ ಉಚ್ಚಾಟನೆಯ ನಂತರ ಜಿಲ್ಲೆಯ ಹಾಗೂ ಇನ್ನೂ ಹಲವು ಕಡೆ ಯಡಿಯೂರಪ್ಪನವರ ಮತ್ತು ರಾಜ್ಯಾಧ್ಯಕ್ಷರಾದ ವಿಜಯೇಂದ್ರರವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವುದಾಗಲಿ ಅಥವಾ ಅವರ ಭಾವಚಿತ್ರಕ್ಕೆ ಅಪಮಾನ ಗೊಳಿಸುವುದಾಗಲಿ ಇದನ್ನ ನಿಷ್ಠಾವಂತ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಯಾರು ಕೂಡ ಒಪ್ಪುವುದಿಲ್ಲ ಮತ್ತು ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಖಂಡಿಸಿದ್ದಾರೆ.