
ಸಿದ್ಧರಾಮಯ್ಯ 99 ತಪ್ಪು ಮಾಡಿದ್ದಾರೆ…100ನೇ ತಪ್ಪು ಮಾಡುತ್ತಲೇ ಕಾಂಗ್ರೆಸ್ ಸರ್ಕಾರದ ಸಂಹಾರ…
ಬಿಜೆಪಿ ಪ್ರತಿಭಟನೆಯಲ್ಲಿ ಬಿ.ವೈ.ವಿಜಯೇಂದ್ರ ವಾಗ್ದಾಳಿ
ದೇವರನ್ನು ನಿಮ್ಮನ್ನು ನೋಡುತ್ತಿದ್ದಾನೆ
ಸಿದ್ಧರಾಮಯ್ಯ 99 ತಪ್ಪು ಮಾಡಿದ್ದಾರೆ…
100ನೇ ತಪ್ಪು ಮಾಡುತ್ತಲೇ ಕಾಂಗ್ರೆಸ್ ಸರ್ಕಾರದ ಸಂಹಾರ…
ಬಿಜೆಪಿ ಪ್ರತಿಭಟನೆಯಲ್ಲಿ ಬಿ.ವೈ.ವಿಜಯೇಂದ್ರ ವಾಗ್ದಾಳಿ
ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಕರ್ನಾಟಕದಾದ್ಯಂತ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಯ ಕಾವು ಜೋರಾಗಿದೆ. ಪ್ರತಿಭಟನೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೇವರು ನಿಮ್ಮ ಕೆಲಸವನ್ನು ನೋಡುತ್ತಿದ್ದು, ಸಿದ್ಧರಾಮಯ್ಯ 99 ತಪ್ಪುಗಳನ್ನು ಈಗಾಗಲೇ ಮಾಡಿದ್ದು, 100ನೇ ತಪ್ಪು ಮಾಡುತ್ತಲೇ ಕಾಂಗ್ರೆಸ್ ಸರ್ಕಾರದ ಸಂಹಾರವಾಗಲಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಕ್ಫ್ ನೀತಿಯ ವಿರುದ್ಧ ಬಿಜೆಪಿ ಪ್ರತಿಭಟನೆಯನ್ನು ನಡೆಸಿತು.
ನಿಜಾಮರ ಕಾಲದಲ್ಲಿ ರಜಾಕಿಗಳು ಜನರನ್ನು ಲೂಟಿ ಮಾಡುತ್ತಿದ್ದರು. ಈಗ ಕಾಂಗ್ರೆಸ್ ರೈತರ 15 ಸಾವಿರ ಎಕರೆಯಷ್ಟು ಜಮೀನನ್ನು ಕಬಳಿಸುಲು ಯತ್ನಿಸುತ್ತಿದೆ. ಜಮೀರ್ ಎಂಬ ದೇಶದ್ರೋಹಿಯ ಮೂಲಕ ಎಲ್ಲ ಜಿಲ್ಲೆಗಳಲ್ಲಿನ ಅಧಿಕಾರಿಗಳನ್ನು ಬೆದರಿಸಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ದೇವರು ನಿಮ್ಮ ಕೆಲಸವನ್ನು ನೋಡುತ್ತಿದ್ದು, ಸಿದ್ಧರಾಮಯ್ಯ 99 ತಪ್ಪುಗಳನ್ನು ಈಗಾಗಲೇ ಮಾಡಿದ್ದು, 100ನೇ ತಪ್ಪು ಮಾಡುತ್ತಲೇ ಕಾಂಗ್ರೆಸ್ ಸರ್ಕಾರದ ಸಂಹಾರವಾಗಲಿದೆ ಎಂದು ವಿಜಯೇಂದ್ರ ವಾಗ್ಧಾಳಿ ನಡೆಸಿದ್ದಾರೆ.
ಇನ್ನು ಪಿಎಂ ಮೋದಿ 2024 ರಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಮಂಡಿಸಲು ಮುಂದಾದಾಗ ಕಾಂಗ್ರೆಸ್ ಪ್ರತಿಭಟಿಸಿತ್ತು. ತಾಯಿಯ ತಾಳಿಗೂ ಕಾಂಗ್ರೆಸ್ ಕೈ ಹಾಕುತ್ತದೆಂದು ಮೋದಿ ಎಚ್ಚರಿಕೆ ನೀಡಿದ್ದರು. ಈಗ ಜಮೀನುಗಳು ವಕ್ಫ್ ಆಸ್ತಿಗಳಾಗುತ್ತಿವೆ. ನೋಟಿಸನ್ನು ಮೌಖಿಕವಾಗಿ ಹಿಂಪಡೆಯದೇ ಕಾನೂನು ರೀತಿ ಆದೇಶ ಮಾಡಬೇಕೆಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.
ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಇನ್ನಿತರರು ಭಾಗಿಯಾಗಿದ್ಧರು.