Uncategorized
ಬೆಳಗಾವಿಯಲ್ಲಿ ಅಕ್ರಮ ಮದ್ಯ ದಾಸ್ತಾನು; ಶಹಾಪೂರ ಪೊಲೀಸರಿಂದ ದಾಳಿ 1,37,681 ರೂ ಮೌಲ್ಯದ 313.3 ಲೀಟರ್ ಗೋವಾ ಮದ್ಯ ವಶ

ಬೆಳಗಾವಿಯಲ್ಲಿ ಅಕ್ರಮ ಮದ್ಯ ದಾಸ್ತಾನು; ಶಹಾಪೂರ ಪೊಲೀಸರಿಂದ ದಾಳಿ
1,37,681 ರೂ ಮೌಲ್ಯದ 313.3 ಲೀಟರ್ ಗೋವಾ ಮದ್ಯ ವಶ
ಗೋವಾ ರಾಜ್ಯದ ಮಧ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಮನೆಯ ಮೇಲೆ ಬೆಳಗಾವಿ ನಗರ ಶಹಾಪೂರ ಪೊಲೀಸರು ದಾಳಿ ಮಾಡಿದ್ದಾರೆ. 1,37,681 ರೂ ಮೌಲ್ಯದ ವಿವಿಧ ಕಂಪನಿಯ 313.3 ಲೀಟರ್ ಗೋವಾ ರಾಜ್ಯದ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಮಹಾದ್ವಾರ ರಸ್ತೆಯ ರಹಿವಾಸಿ ಸುಭಾಷ ಸುಧೀರ ಡೇ ಗೋವಾ ರಾಜ್ಯದ ಮದ್ಯವನ್ನು ಕಡಿಮೆ ಬೆಲೆಗೆ ಖರೀದಿಸಿ ಬೆಳಗಾವಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬೆಳಗಾವಿ ಶಹಾಪೂರ ಹುಲಬತ್ತಿ ಕಾಲನಿಯ ತನ್ನ ಸಂಬಂಧಿಕರ ಮನೆಯಲ್ಲಿ ಯಾವುದೇ ಲೈಸನ್ಸ್ ವ ಪರಮೀಟ್ ಇಲ್ಲದೇ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ.
ಈ ಕುರಿತು ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟೀನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ ಜಗದೀಶ, ಡಿಸಿಪಿ ನಿರಂಜನ ರಾಜ್ ಅರಸ್, ಮಾರ್ಕೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸಂತೋಷ ಸತ್ಯನಾಯಕ ಅವರ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್’ಗಳಾದ ಎಸ್ ಎಸ್ ಸಿಮಾನಿ ಇವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಯ ತಂಡವು ಈ ದಾಳಿಯನ್ನು ನಡೆಸಿ, ಗೋವಾ ರಾಜ್ಯದ 1,37,681 ರೂ ಮೌಲ್ಯದ ವಿವಿಧ ಕಂಪನಿಯ 313.3 ಲೀಟರ್ ಮಧ್ಯವನ್ನು ವಶಕ್ಕೆ ಪಡೆದುಕೊಂಡು ಆರೋಪಿತನ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ದಾಳಿ ತಂಡದಲ್ಲಿ ಶಹಾಪೂರ ಪೊಲೀಸ್ ಠಾಣೆಯ ನಾಗರಾಜ ಓಸಪ್ಪಗೋಳ, ಸಂದೀಪ ಬಾಗಡಿ,
ಜಗದೀಶ ಹಾದಿಮನಿ, ಶ್ರೀಧರ ತಳವಾರ, ಶ್ರೀಶೈಲ್ ಗೋವಾವಿ, ಸುರೇಶ ಲೋಕುರೆ, ಅಜೀತ ಶಿಪೂರೆ, ಸಿದ್ದರಾಮೇಶ್ವರ ಮುಗಳಖೋಡ, ವಿಜಯ ಕಮತೆ ಭಾಗವಹಿಸಿದ್ದರು. ಇವರ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.