Uncategorized
ಉಗ್ರರ ದಾಳಿ ಹಿನ್ನೆಲೆಯಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಲೈವ್ ಬಂದು ಕನ್ನಡಿಗ ವಕೀಲ ಮಲ್ಲಿಕಾರ್ಜುನ ಭೃಂಗಿಮಠ

ಉಗ್ರರ ದಾಳಿ ಹಿನ್ನೆಲೆಯಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಲೈವ್ ಬಂದು ಕನ್ನಡಿಗ ವಕೀಲ ಮಲ್ಲಿಕಾರ್ಜುನ ಭೃಂಗಿಮಠ
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ರಕ್ಕಸ ದಾಳಿಗೆ ಬಲಿಯಾಗಿದ್ದಾರೆ. ಇಡೀ ದೇಶ ಆಕ್ರೋಶ ವ್ಯಕ್ತಪಡಿಸುತ್ತಿದೆ. ಉಗ್ರರ ಮೇಲೆ ಉಗ್ರ ಕ್ರಮವಾಗಲಿ ಎಂಬ ಆಗ್ರಹ ಕೇಳಿ ಬರುತ್ತಿದೆ. ಇನ್ನೂ ಹಲವು ಕನ್ನಡಿಗರು ಕಾಶ್ಮೀರದ ಪ್ರವಾಸದಲ್ಲಿದ್ದು ಕನ್ನಡಿಗ ವಕೀಲರೊರ್ವರು ಲೈವ್ ಬಂದು ಸುರಕ್ಷಿತವಾಗಿದ್ದಿವಿ ಎಂದು ತಿಳಿಸಿದ್ದಾರೆ.

ವಿಜಯಪುರ ನಗರದ ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಇವರು ಕುಟುಂಬದ ಜೊತೆಗ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದಾರೆ. ನಾವು ಉಗ್ರರ ದಾಳಿಯಾದ ಸ್ಥಳದಿಂದ ದೂರದಲ್ಲಿದ್ದೇವೆ. ನಾವು ಈಗ ಆರಾಮಾಗಿದ್ದೇವೆ. ಈಗ ಮೊನ್ನೆ ಮತ್ತು ನಿನ್ನೆ ಪಹಲ್ಲಾಂನಲ್ಲಿದೆವು. ಅಲ್ಲಿ ಅರುವಿ ಮತ್ತು ಬೇತಾಳ ನೋಡಿಕೊಂಡು ಬಂದಿ.
ನಮ್ಮಟೂರು ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ನಾವು ಇಂದು ಬೆಳಗ್ಗೆ. 11:00 ಗಂಟೆಗೆ ಪಹಲ್ಲಾಮ್ ಬಿಟ್ಟಿವಿ ಬಿಟ್ಟ ನಂತರ 1 ಗಂಟೆ ನಂತರ ಫೋನ್‌ಗಳು ಬರುತ್ತಿದ್ದವು. ಗೆಳೆಯರು ಜಮ್ಮು ಕಾಶ್ಮೀರ ಇದ್ದಿರಿ ಹೇಗಿದ್ದಿರಿ ಎಂದು ಕೇಳುತ್ತಿದ್ದರು ಆರಂಭದಲ್ಲಿ ಅಂತ ಯಾಕೆ ಏನು ಉಗ್ರರ ದಾಳಿ ಆಗಿದೆ ಅಂತ ಫೋನು ಬರುತ್ತಿದ್ದವು.

ನಮಗೆ ಗೊತ್ತಿರಲಿಲ್ಲ. ನಾವು ಕೂಡ ಅನಂತರ ಟಿವಿ ನೋಡಿ ತಿಳ್ಕೊಂಡೆವು. ಈಗ ನಾವು ಆರಾಮವಾಗಿದ್ದೇವೆ. ನಾವೆಲ್ಲ ಇದ್ದೇವೆ, ನಾವು ಈಗ ಶ್ರೀನಗರಕ್ಕೆ ಬಂದ್ದಿಟ್ಟು ಅಲ್ಲಿ ಸ್ಪಾಟಿಂಗ್ ಮಾಡಲಿದ್ದೇವೆ, ಯಾವುದೇ ಚಿಂತನೆ ಮಾಡುವ ಅಗತ್ಯ ಇಲ್ಲಾ ಎಂದು ಅದಕೋಸ್ಕರ ಮಾಹಿತಿಗಾಗಿ ನಿಮ್ಮಲ್ಲಿ ಕೊಟ್ಟಿದ್ದೇವೆ. ನಮ್ಮ ಪ್ರಯಾಣ ಸುಖಕರವಾಗಿದೆ ಎಂದು ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಫೆಸ್ಬುಕ್ ಲೈವ್ ಮೂಲಕ ಮಾಹಿತಿ ನೀಡಿದ್ದಾರೆ.