
ನೋ ಸೂಟಿ… ಫೂಲ್ ಡ್ಯೂಟಿ…2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರವು ಸೇವೆ ಸಲ್ಲಿಸಲಿದೆ ಸಬ್ ರೆಜಿಸ್ಟರ್ ಕಾರ್ಯಾಲಯ…
ಬೆಳಗಾವಿಯ ಉಪ ನೋಂದಣಿ ಕಾರ್ಯಾಲಯವು ಇನ್ಮುಂದೆ 2ನೇ ಶನಿವಾರ ಮತ್ತು 4ನೇ ಶನಿವಾರ ಹಾಗೂ ಭಾನುವಾರದ ರಜೆ ದಿನಗಳಂದು ಕೂಡ ಕಾರ್ಯನಿರ್ವಹಿಸಲಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಈಗಾಗಲೇ ಎನಿವೇರ್ ರಜಿಸ್ಟ್ರೇಶನ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ವ್ಯಾಪ್ತಿಯ ಉಪ ನೋಂದಣಿ ಕಾರ್ಯಾಲಯಗಳು 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರದ ರಜಾ ದಿನಗಳಂದು ಕಾರ್ಯನಿರ್ವಹಿಸಲು ಸರ್ಕಾರವು ಆದೇಶಿಸಿದೆ.
ರಜಾ ದಿನದಲ್ಲಿ ಕಾರ್ಯನಿರ್ವಹಿಸುವ ಕಾರ್ಯಾಲಯದಲ್ಲಿ ಜಿಲ್ಲೆಯ ಯಾವುದೇ ಸ್ವತ್ತನ್ನು ನೋಂದಣಿ ಮಾಡಿಸಬಹುದಾಗಿದೆ. ಸಾರ್ವನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.