
– ಮಹಿಳೆಯರು ಶಕ್ತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ-ಶಾಸಕ ಶ್ರೀ ಮಾಹಾಂತೇಶ ಕೌಜಲಗಿ
ಬೈಲಹೊಂಗಲ ನಗರದ ಕೇಂದ್ರ ಬಸ ನಿಲ್ದಾಣದಲ್ಲಿ ಇಂದು ಕರ್ನಾಟಕ ಸರ್ಕಾರದ ಮಹಾತ್ವಾ ಕಾಂಕ್ಷಿ ಯೋಜನೆಗಳಾದ ಗ್ಯಾರಂಟಿ ಯೋಜನೆಯಡಿಯಲ್ಲಿರುವ ಶಕ್ತಿ ಯೋಜನೆಯ ಪ್ರಯುಕ್ತ ರಾಜ್ಯಾದ್ಯಂತ 500 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ್ಯ ಶ್ರೀ ಮಹಾಂತೇಶ ಎಸ್ ಕೌಜಲಗಿ ಶಾಸಕರು ಬೈಲಹೊಂಗಲ ರವರು ಕರೆ ನೀಡಿದರು.
ಗ್ರಾಮೀಣ ಹಾಗೂ ನಗರದ ಮಹಿಳೆಯರು ಪ್ರತಿನಿತ್ಯ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಆರಿಸಿಕೊಂಡು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಹೋಗುವ ಮತ್ತು ಬರುವ ಅನಕೂಲಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯನ್ನು ರಾಜ್ಯದ ಪ್ರತಿ ಮಹಿಳೆಯು ರಾಜ್ಯದ ಯಾವುದೇ ಸ್ಥಳಗಳಿಗೆ ಹೋಗಿ ಬಂದರು ಸಹ ಉಚಿತ ಬಸ್ ಪ್ರಯಾಣ ಮಾಡಬಹುದು ಅದರ ಸದುಪಯೋಗವನ್ನು ತಪ್ಪದೇ ಬಳಸಿಕೊಳ್ಳಬೇಕೆಂದು ಶಾಸಕರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಡಾ.ಮಹಾಂತೇಶ ಕಳ್ಳಿಬಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಸಂಜೀವ ಜೂನ್ನೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ವಿಜಯಕುಮಾರ, ಬಸ್ ವ್ಯವಸ್ಥಾಪಕರು ತಿರಕನ್ನವರ ಹಾಗೂ ಗ್ಯಾರಂಟಿ ಯೋಜನೆ ಸದಸ್ಯರು ರಮೇಶ ಪರಂಡಿ, ಹಸನಸಾಬ ಗೋರವನಕೊಳ್ಳ, ಅಬ್ದುಲಸಾಬ ದೀಲುನಾಯ್ಕ, ಪ್ರಕಾಶ ಪಾಟೀಲ, ಸುರೇಶ ಬಿ ನಾಯ್ಕರ, ಸುನೀಲ ಕುಲಕರ್ಣಿ, ಅಂಬಿಕಾ ಪಿ ಕೊಟಬಾಗಿ, ಬಸವರಾಜ್ ಚಿಕ್ಕನಗೌಡರ, ಖಾಸಿಂ ಜಮಾದಾರ, ನಾಗನಗೌಡ ಪಾಟೀಲ, ದಾನಮ್ಮ ಹರಕುಣಿ, ವಿಠ್ಠಲ ಸೂರಣ್ಣವರ, ಯಮನಪ್ಪ ತಳವಾರ, ಸೋಮಪ್ಪ ಸತ್ಯಣ್ಣವರ ಹಾಗೂ ಇತರ ಅಧಿಕಾರಿ ವರ್ಗದವರು, ಇತರರು ಮತ್ತು ಮಹಿಳೆಯರು ಹಾಜರಿದ್ದರು.
ವರದಿ: ಕಿರಣರಾಜ ಕುಡಚಿಮಠ
ಸ್ಥಳ: ಬೈಲಹೊಂಗಲ
ಸ್ಥಳ: ಬೈಲಹೊಂಗಲ