
ರವಿವಾರ ದಿನಾಂಕ 13-07-2025 ಬೈಲಹೊಂಗಲ ರೈತ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ,
ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಬೈಲಹೊಂಗಲ
ತಾಲ್ಲೂಕು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ,. ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸದ ಭಾಗದ ಶಾಸಕರು ಹಾಗೂ ರೈತರಿಗೆ ಕಳಪೆ ಬೀಜ ವಿತರಣೆ ಸಂಬಂಧ ಮನವಿ ಸಲ್ಲಿಸಿದರು. ಯಾವದೇ ಪರಿಹಾರ ನೀಡದ ಅಧಿಕಾರಿ ವರ್ಗಕ್ಕೆ ರೈತ ಸಂಘದ ಜಿಲ್ಲಾ ಅಧ್ಯಕ್ಷರು ಆಕ್ರೋಶ ಹೊರಹಾಕಿದರು.ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಿ ಇಲ್ಲ ಎಂದರೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಪದಾಧಿಕಾರಿಗಳ ನೇಮಕ ಮತ್ತು ಆದೇಶ
1)ಆನಂದಗೌಡ ಬಸನಗೌಡ ಪಾಟೀಲ್ ಬೈಲಹೊಂಗಲ್ ತಾಲೂಕ ಉಪಾಧ್ಯಕ್ಷರು.
2) ಶ್ರೀಶೈಲ್ ಮಲ್ಲಪ್ಪ ಬೋರಕ್ನವರ್ ಬೈಲಹೊಂಗಲ ನಗರ ಉಪಾಧ್ಯಕ್ಷರು
3) ಅಣ್ಣಪ್ಪ ಅರಳಿಕಟ್ಟಿ (ಗುಮತಿ) ಬೈಲಹೊಂಗಲ ನಗರ ಅಧ್ಯಕ್ಷರು
ಮೇಲ್ಕಂಡ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ್ ಹುಂಬಿ (ಅ ಕ ರಾ ರೈ ಸಂ) ಬೆಳಗಾವಿ ಜಿಲ್ಲಾಧ್ಯಕ್ಷರು, ಶ್ರೀ ಬಸವರಾಜ್ ಹಣ್ಣಿಕೇರಿ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶ್ರೀ ಮಹೇಶ್ ಕಾದ್ರೊಳ್ಳಿ ಬೆಳಗಾವಿ ಜಿಲ್ಲಾ ಕಾರ್ಯದರ್ಶಿ
ಶ್ರೀ ವಿಠಲ್ ಯಾಸನ್ನವರ್ ಬೈಲಹೊಂಗಲ್ ತಾಲೂಕ ಅಧ್ಯಕ್ಷರು, ಶ್ರೀ ರುದ್ರಪ್ಪ ಹಾಲಿಮರಡಿ, ಶ್ರೀ ಶಂಕರ್ ಸುಣಗಾರ್, ಶ್ರೀ ಅಶೋಕ್ ಮತ್ತಿಕೊಪ್ಪ, ಬಸವರಾಜ್ ಹೊಟ್ಕರ್, ಮಹಾಂತೇಶ ಹೊಸಮನಿ, ರಘು ಶಿಗೆಹಳ್ಳಿ, ಮಲ್ಲಿಕಾರ್ಜುನ್ ಇಂಚಲ್, ಅಣ್ಣಪ್ಪ ಗುಮತಿ ,ಈರಣ್ಣ ಮಣ್ಣುರ, ಸಂದೀಪ್ ಬಡಿಗೇರ್, ಮಹಾಂತೇಶ್ ಮಾತೆಮ್ಮನವರ್, ರುದ್ರಪ್ಪ ಹುಣಶೀಕಟ್ಟಿ, ಮಹಾಂತೇಶ್ ಬೆಟಗೇರಿ, ರಾಜು ಸಂಗೊಳ್ಳಿ, ವಿಠಲ್ ಇಂಚಲ್, ಶಂಕರಯ್ಯ ಕುಲಕರ್ಣಿ ಸೇರಿದಂತೆ ಇನ್ನು ಅನೇಕ ರೈತ ಮುಖಂಡರು ಹಾಜರಿದ್ದರು.
ವರದಿ -ಕಿರಣರಾಜ ಕುಡಚಿಮಠ
ಸ್ಥಳ – ಬೈಲಹೊಂಗಲ