ಬೆಳಗಾವಿರಾಜ್ಯ

Belagavi Dc Car seized 30 ವರ್ಷ ಬಳಿಕ ಹೊರ ಬಿದ್ದ ತೀರ್ಪು… 1.34 ಕೋಟಿ ಬಿಲ್ ಬಾಕಿ; ಬೆಳಗಾವಿ ಡಿಸಿ ಕಾರ್ ಸೀಜ್ !!!

30 ವರ್ಷ ಬಳಿಕ ಹೊರ ಬಿದ್ದ ತೀರ್ಪು… 1.34 ಕೋಟಿ ಬಿಲ್ ಪಾವತಿಸಲು ವಿಫಲ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ ಸೀಜ್… ನ್ಯಾಯಾಲಯದ ಆದೇಶ ಪಾಲನೆ

Belagavi Dc Car seized
30 ವರ್ಷ ಬಳಿಕ ಹೊರ ಬಿದ್ದ ತೀರ್ಪು…
1.34 ಕೋಟಿ ಬಿಲ್ ಬಾಕಿ; ಬೆಳಗಾವಿ ಡಿಸಿ ಕಾರ್ ಸೀಜ್ !!!
30 ವರ್ಷ ಬಳಿಕ ಹೊರ ಬಿದ್ದ ತೀರ್ಪು…
1.34 ಕೋಟಿ ಬಿಲ್ ಪಾವತಿಸಲು ವಿಫಲ
ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ ಸೀಜ್…
ನ್ಯಾಯಾಲಯದ ಆದೇಶ ಪಾಲನೆ
30 ವರ್ಷದ ಹಿಂದೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ ಬಡ್ಡಿ ಸಮೇತ 1.34 ಕೋಟಿ ಬಾಕಿ ಬಿಲ್ ನೀಡಲೂ ವಿಫಲವಾದ ಹಿನ್ನೆಲೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರನ್ನೇ ಜಪ್ತಿ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹೌದು, 1992-93 ರಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಚಿಕ್ಕೋಡಿ ಜಿಲ್ಲೆಯ ದೂಧಗಂಗಾ ನದಿಗೆ ಬ್ಯಾರೇಜ್ ನಿರ್ಮಿಸುವ ಗುತ್ತಿಗೆಯನ್ನು ದಿವಂತ ನಾರಾಯಣ್ ಗಣೇಶ್ ಕಾಮತ್ ಅವರಿಗೆ ನೀಡಲಾಗಿತ್ತು. ಗುತ್ತಿಗೆಯ ವೇಳೆ ಬೇಕಾಗುವ ಸಿಮೆಂಟ್ ಮತ್ತು ಅನುದಾನವನ್ನು ಇಲಾಖೆಯೇ ನೀಡುವುದಾಗಿ ಷರತ್ತುಬದ್ಧ ಗುತ್ತಿಗೆ ಇದಾಗಿತ್ತು. ಮೂರು ವರ್ಷ ಕಳೆದರೂ ಇಲಾಖೆಯೂ ಷರತ್ತಿನ ಪ್ರಕಾರ ನಡೆದುಕೊಳ್ಳದ ಹಿನ್ನೆಲೆ ಗುತ್ತಿಗೆದಾರ ನಾರಾಯಣ್ ಕಾಮತ್ ಆರ್ಥಿಕ ಸಂಕಷ್ಟಕ್ಕೊಳಗಾಗಿ 1995 ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು.
ಆವಾಗ ಬೆಳಗಾವಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 34 ಲಕ್ಷ ರೂಪಾಯಿ ನೀಡುವಂತೆ ಆದೇಶಿಸಿತ್ತು. ಆದರೇ, ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಹೈಕೋರ್ಟ್’ಗೆ ಮೇಲ್ಮನವಿ ಸಲ್ಲಿಸಿದ್ದರು. ಆವಾಗ ಹೈಕೋರ್ಟ್ ಪುರ್ನವಿಚಾರಣೆಗೆ ಆದೇಶಿಸಿತ್ತು. ವಿಚಾರಣೆಯ ಬಳಿಕ ಜೂನ್ 2024ರ ಒಳಗೆ ಶೇ. 50 ರಷ್ಟು ಬಿಲ್ ಬಡ್ಡಿ ಸಮೇತ ಗುತ್ತಿಗೆದಾರನಿಗೆ ಬಿಲ್ ಪಾವತಿಸುವಂತೆ ತೀರ್ಪು ನೀಡಿತ್ತು. ಆದರೇ, ಇದರಲ್ಲಿಯೂ ವಿಫಲವಾದ ಹಿನ್ನೆಲೆ ನ್ಯಾಯಾಲಯ ವಾರಂಟ್ ಜಾರಿ ಮಾಡಿದ್ದು, ಬೆಳಗಾವಿ ಜಿಲ್ಲಾಧಿಕಾರಿಗಳ ಕಾರನ್ನೇ ಜಪ್ತಿ ಮಾಡಲಾಗಿದೆ ಎಂದು ನ್ಯಾಯವಾದಿ ಓ.ಬಿ. ಜೋಷಿ ಮಾಹಿತಿಯನ್ನು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button