
ಮಾದಕ ವಸ್ತುಗಳ ನಿರ್ಮೂಲನ ಜಾಗೃತಿ ಅಭಿಯಾನ
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಭಾಗಿ
ಹುಟ್ಟು ಅನ್ನೋದು ಒಂದು ಗಿಫ್ಟ್ ಅದನ್ನ ಕಾಪಾಡಿಕೊಳ್ಳಬೇಕು
ಮಾದಕ ವಸ್ತುಗಳಿಂದ ಜೀವನ ಹಾಳಾಗುತ್ತದೆ
ವಿದ್ಯಾರ್ಥಿಗಳು ಮಾದಕ ವಸ್ತುವಿನ ನಶೆ ಬಿಡಬೇಕು ನಾನು ಪ್ರತಿ ಅಭಿಮಾನಿಯನ್ನು ಸ್ನೇಹಿತನನ್ನಾಗಿ ನೋಡ್ತೇನೆ. ಡ್ರಗ್ಸ್ ನಿಂದ ನಾವು ದೂರ ಇರಬೇಕು.
ಶಬ್ದವೇದಿ ಯಲ್ಲಿ ಅಪ್ಪಾಜಿ ಅದ್ಬುತವಾಗಿ ಹೇಳಿದ್ದಾರೆ.
ಹುಟ್ಟು ಅನ್ನೋದು ಒಂದು ಗಿಫ್ಟ್ ಅದನ್ನ ಕಾಪಾಡಿಕೊಳ್ಳಬೇಕು. ನಶೆಯನ್ನು ಓದುವುದರಲ್ಲಿ ಹುಡುಕಿ, ಗೆಳೆತನದಲ್ಲಿ ಹುಡುಕಿ ಬೇರೆ ಎಲ್ಲದರಲ್ಲೂ ನಶೆ ಇದೆ ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹೇಳಿದರು.
ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜಿನಲ್ಲಿ ಮಾದಕ ವ್ಯಸನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಇದಕ್ಕೆ ನಾವು ಯಾವಾಗ ದಾಸರಾಗ್ತೇವೋ ಲೈಫ್ ಹಾಳಾಗುತ್ತೆ.
ಯಾರು ಮಾಡ್ತಾರೆ, ಅವರನ್ನ ಪೊಲೀಸರಿಗೆ ಹಿಡಿದುಕೊಡಿ. ಕೆಎಲ್ ಇ ಕಾಲೇಜಿಗೆ ಬಂದಿದ್ದು ಖುಷಿ ಆಗ್ತಿದೆ ಎಂದರು.
ನನಗೆ 62 ವರ್ಷ . ಇಲ್ಲಿಗೆ ಬಂದು ಉಲ್ಟಾ ಆಗಿ 26 ಆಗಿದೆ. ಬೈರಾತಿ ರಣಗಲ್ ನಲ್ಲಿ ಒಳ್ಳೆತನಕ್ಕಾಗಿ ನಾಯಕ ಹೋರಾಡ್ತಾನೆ ಎಂದರು.
ಜಾಗೃತಿ ಅಭಿಯಾನದಲ್ಲಿ ಶಿವರಾಜಕುಮಾರ್ ಸಖತ್ ಸ್ಟೆಪ್ಸ್ ಹಾಕಿದರು.
ಟಗರು ಚಿತ್ರದ ಟಗರು ಬಂತು ಟಗರು ಹಾಡಿಗೆ ಸ್ಟೆಪ್ಸ್ ಹಾಕಿದರು. ಮುತ್ತಣ ಪೀಪಿ ಊದುವ ಹಾಡು ಹಾಡಿ ರಂಜಿಸಿದರು.