ಜಲಜೀವನ ಮಿಷನ್ ಯೋಜನೆ ಸದ್ಭಳಕೆಯಾಗಲಿ”: ರಾಹುಲ್ ಶಿಂಧೆ
ಜಲಜೀವನ ಮಿಷನ್ ಯೋಜನೆ ಸದ್ಭಳಕೆಯಾಗಲಿ” ಜಲಜೀವನ ಮಿಷನ್ ಯೋಜನೆಯು ಪ್ರತಿ ಕುಟುಂಬದಲ್ಲಿ ಸದ್ಬಳಕೆಯಾಗಲಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರಾಹುಲ್ ಶಿಂಧೆ ಯವರು ಕರೆ ನೀಡಿದರು.

ಜಲಜೀವನ ಮಿಷನ್ ಯೋಜನೆ ಸದ್ಭಳಕೆಯಾಗಲಿ”
ಜಲಜೀವನ ಮಿಷನ್ ಯೋಜನೆಯು ಪ್ರತಿ ಕುಟುಂಬದಲ್ಲಿ ಸದ್ಬಳಕೆಯಾಗಲಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರಾಹುಲ್ ಶಿಂಧೆ ಯವರು ಕರೆ ನೀಡಿದರು.
ಬೈಲಹೊಂಗಲ ತಾಲೂಕಿನ ಗ್ರಾಪಂ ನೇಸರಗಿ, ಮಲ್ಲಾಪೂರ ಕೆ ಎನ್ ಮತ್ತು ವಣ್ಣೂರ ಕ್ಕೆ ಇಂದು ಭೇಟಿ ನೀಡಿ ವಿವಿಧ ಯೋಜನೆಗಳನ್ನು ವೀಕ್ಷಣೆ ಮಾಡಿದರು ಅದರಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವಂತಹ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಪ್ರತಿ ಮನೆಯ ನಲ್ಲಿಗಳಲ್ಲಿ ನೀರು ಬರುವಂತಹ ಕ್ಷಣವನ್ನು ವೀಕ್ಷಣೆ ಮಾಡಿದರು ಸ್ಥಳೀಯ ಮಹಿಳೆಯರನ್ನು ಮಾತನಾಡಿಸಿ ನೀರು ಬರುವದರ ಬಗ್ಗೆ ಖಚಿತಪಡಿಸಿಕೊಂಡರು.
ತದನಂತರ ಸದರಿ ಗ್ರಾಮದಲ್ಲಿರುವ ಐ.ಟಿ.ಐ ಕಾಲೇಜಿಗೆ ಭೇಟಿ ನೀಡಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ವೀಕ್ಷಣೆ ಹಾಗೂ ಉಪನ್ಯಾಸಕರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು
ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಗೆ ಭೇಟಿ ನೀಡಿ ಮಹಿಳಾ ಒಕ್ಕೂಟದ ಪ್ರತಿನಿಧಿಗಳಿಗೆ ಒಕ್ಕೂಟದಿಂದ ಗ್ರಾಮೀಣ ಮಹಿಳೆಯರಿಗೆ ಹಾಗೂ ರೈತಾಪಿ ಕುಟುಂಬಗಳಿಗೆ ಅನಕೂಲಕರವಾಗಿ ಬೆಳಯಬೇಕು ಎಂದು ತಿಳಿಸಿದರು.
ತದನಂತರ ಮಲ್ಲಾಪೂರ ಕೆ ಎನ್ ಮತ್ತು ವಣ್ಣೂರ ಗ್ರಾಮಗಳಿಗೆ ಭೇಟಿ ನೀಡಿದರು ಸದರಿ ಗ್ರಾಮಗಳಲ್ಲಿಯೂ ಸಹ ಜಲಜೀವನ ಮಿಷನ್ ಯೋಜನೆಯಡಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು ಗ್ರಾಮದ ಪ್ರತಿ ಕುಟುಂಬವು ಯೋಜನೆಯ ಸದ್ಭಳಕೆಯಾಗಲಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಬೆಳಗಾವಿ ಕಾರ್ಯನಿರ್ವಾಹಕ ಅಭಿಯಂತರರು ಕಿರಣ ಘೋರ್ಪಡೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಜೀವ ಜುನ್ನೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಬೈಲಹೊಂಗಲ ಮಹೇಶ ಹೂಲಿ ಹಾಗೂ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.