ನೂತನವಾಗಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪಥಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬೈಲಹೊಂಗಲ: ನೂತನವಾಗಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪಥಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಬೈಲಹೊಂಗಲ: ಪಟ್ಟಣದ ಹೊರವಲಯದ ದೇವಲಾಪುರ ರಸ್ತೆಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ರೂ.5.50 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪಥವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಶಾಸಕ ಮಹಾಂತೇಶ ಕೌಜಲಗಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತೇಶ ಶಾಸ್ತ್ರೀ ಆರಾದ್ರಿ ಮಠ, ಪುರಸಭೆ ಅಧ್ಯಕ್ಷ ವಿಜಯ ಬೋಳ ನ್ನವರ, ಅಪರ ಸಾರಿಗೆ ಆಯುಕ್ತ ಬಿ ಪಿ ಉಮಾಶಂಕರ, ಕೆ ಟಿ ಹಾಲ ಸ್ವಾಮಿ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ, ಯೋಗೇಶ ಎ.ಎಂ, ಜಂಟಿ ಸಾರಿಗೆ ಆಯುಕ್ತ ಎಂ ಪಿ ಓಂಕಾರೇ ಶ್ವರಿ,ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯಾನಂದ ನರಸಣ್ಣವರ, ತಹಸೀಲ್ದಾರ್ ಎಚ್.ಎನ್ ಶಿರಹಟ್ಟಿ, ಘಟಕ ವ್ಯವಸ್ಥಾಪಕ ಮಹೇಶ ತಿರಕನ್ನವರ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಗಳು, ಗ್ಯಾರಂಟಿ ಸಮಿತಿ ಸದಸ್ಯರು ಇದ್ದರು.
ವರದಿ: ಕಿರಣರಾಜ ಕುಡಚಿಮಠ
ಸ್ಥಳ: ಬೈಲಹೊಂಗಲ