Uncategorized
ಕಲುಷಿತ ನೀರು ಹೊಲಗಳಿಗೆ ನುಗ್ಗದಂತೆ ಬಿಟಿಡಿಎ ಕಚೇರಿಗೆ ರೈತರ ಮುತ್ತಿಗೆ:
ಕಲುಷಿತ ನೀರು ಹೊಲಗಳಿಗೆ ನುಗ್ಗದಂತೆ

ಕಲುಷಿತ ನೀರು ನುಗ್ಗಿ ಕಬ್ಬು ನಾಶ ; ಬಿಟಿಡಿಎ ಕಚೇರಿಗೆ ರೈತರ ಮುತ್ತಿಗೆ:
ಕಲುಷಿತ ನೀರು ಹೊಲಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರೈತರು ಎತ್ತಿನ ಬಂಡಿಗಳ ಸಮೇತ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.
ಬಿಟಿಡಿಎ ಕಚೇರಿಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ ರೈತರು, ಕೆಲಸಕ್ಕೆ ಬಂದ ಅಧಿಕಾರಿಗಳನ್ನು ಒಳಗೆ ಹೋಗದಂತೆ ತಡೆದರು. ಇದರಿಂದಾಗಿ ಅಧಿಕಾರಿಗಳು ಕಚೇರಿಯ ಹೊರಗಡೆಯೇ ನಿಂತು ಸುಸ್ತಾದ ಘಟನೆ ನಡೆಯಿತು. ಸರ್ವೆ ನಂಬರ್ 117, 118 ಮತ್ತು 119 ರ ವ್ಯಾಪ್ತಿಯ ಸುಮಾರು 20 ಎಕರೆ ಜಮೀನಿಗೆ ಕಲುಷಿತ ನೀರು ನುಗ್ಗಿದ್ದು, ಕೈಗೆ ಬಂದ ಕಬ್ಬಿನ ಬೆಳೆ ನಾಶವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಲುಷಿತ ನೀರು ಹೊಲಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಿಸಲು ಕಳೆದ 2025 ರ ಮೇ ತಿಂಗಳಿನಲ್ಲೇ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಟಾವಿಗೆ ಬಂದಿರುವ ಕಬ್ಬು ಕಲುಷಿತ ನೀರಿನಲ್ಲಿ ನಿಂತಿರುವುದರಿಂದ ಕೂಲಿಕಾರ್ಮಿಕರು ಕಬ್ಬು ಕತ್ತರಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ದಿಕ್ಕು ತೋಚದಂತಾಗಿರುವ ರೈತರು, ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

