ರಾಜಕೀಯರಾಜ್ಯ

ಮರುಸಿಂಚನ ತರಬೇತಿ ಕಾರ್ಯಗಾರಕ್ಕೆ ಸಂದರ್ಶನ ನೀಡಿದ ಬೆಳಗಾವಿ ಡಯಟ್ ಪ್ರಾಚಾರ್ಯರು

ಮರುಸಿಂಚನ ತರಬೇತಿ ಕಾರ್ಯಗಾರಕ್ಕೆ ಸಂದರ್ಶನ ನೀಡಿದ ಬೆಳಗಾವಿ ಡಯಟ್ ಪ್ರಾಚಾರ್ಯರು

ಮರುಸಿಂಚನ ತರಬೇತಿ ಕಾರ್ಯಗಾರಕ್ಕೆ ಸಂದರ್ಶನ ನೀಡಿದ ಬೆಳಗಾವಿ ಡಯಟ್ ಪ್ರಾಚಾರ್ಯರು

ಇವತ್ತು ದಿನಾಂಕ 07/01/2026 ರಂದು ಬಿ ಆರ್ ಸಿ ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಮರು ಸಿಂಚನ, ಜ್ಞಾನ ಸೇತು ಮತ್ತು ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರಕ್ಕೆ ಇವತ್ತು ಬೆಳಗಾವಿ ಡಯಟ್ ಪ್ರಾಚಾರ್ಯರಾದ ಶ್ರೀಯುತ ಅಶೋಕ್ ಸಿಂದಗಿ ಸಾಹೇಬರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಡಯಟ್ ನ ಉಪನ್ಯಾಶಕರಾದ ಶ್ರೀಯುತ ಸುನಧೋಳಿ ಸರ್ ಮತ್ತು ಶ್ರೀಮತಿ ರಾಶಿ ನಾಯಕ್ ಮೇಡಂ ಮತ್ತು ಶಿಕ್ಷಕ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಜಯಕುಮಾರ್ ಹೆಬಳಿ ರವರು ಉಪಸ್ಥಿತರಿದ್ದರು.

ಮಾನ್ಯ ಪ್ರಾಚಾರ್ಯರು ತರಬೇತಿ ಶಿಕ್ಷಕರನ್ನು ಉದ್ದೇಶಿಸಿ ಇವತ್ತಿನ ಶಿಕ್ಷಕರಿಗೆ ಅತ್ಯಂತ ಕೆಲಸ ಕಾರ್ಯಗಳು ಒತ್ತಡಗಳಿದ್ದು, ಆ ಒತ್ತಡಗಳನ್ನು ನಿವಾರಿಸಿಕೊಂಡು ಭವ್ಯ ಭವಿಷ್ಯದ ನಿರ್ಮಾತೃಗಳಾದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದು ಕರೆಕೊಟ್ಟರು.

ಇದರ ಜೊತೆಯಲ್ಲಿ ಶ್ರೀ ಜಯಕುಮಾರ್ ಸರ್ ಅವರು ಅವರು ಶಿಕ್ಷಕರ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಉಪಾಯಗಳನ್ನು ನೀಡುವುದರ ಜೊತೆಗೆ NPS, KASS ಮತ್ತು ಅನೇಕ ವಿಷಯಗಳ ಕುರಿತು ಶಿಕ್ಷಕರ ಜೊತೆ ಚರ್ಚಿಸಿದರು,

ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀಮತಿ ರಾಶಿ ನಾಯಕ್ ಮೇಡಂ ಅವರು ತರಬೇತಿಯ ಅವಶ್ಯಕತೆ ಮತ್ತು ಅದರ ಉಪಯೋಗವನ್ನು ತರಗತಿಗಳಲ್ಲಿ ಮಾಡಿಕೊಂಡಾಗ ಮಾತ್ರ ತರಬೇತಿಯು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು. ನಂತರ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ್ ಕಂಬಾರರು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ತಿಳಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button