Uncategorized
ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ; ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು;
ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ; ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು;

ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ;
ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು; ಎಸ್ಪಿ ರಾಮರಾಜನ್ ಕೆ.
ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ
ಮೃತರ ಸಂಖ್ಯೆ 7ಕ್ಕೆ ಏರಿಕೆ
ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು
ಎಸ್ಪಿ ರಾಮರಾಜನ್ ಕೆ. ಮಾಧ್ಯಮಗೋಷ್ಟಿ
ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭೀಕರ ಅವಘಡದಲ್ಲಿ ಬಲಿಯಾದ ಕಾರ್ಮಿಕರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಬುಧವಾರ ಮಧ್ಯಾಹ್ನ ಸಂಭವಿಸಿದ ಈ ಘಟನೆಯಲ್ಲಿ ನಿನ್ನೆ ಮೂವರು ಸಾವನ್ನಪ್ಪಿದ್ದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮತ್ತೆ ನಾಲ್ವರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ. ಸದ್ಯ ಒಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ರಾಮರಾಜನ್ ಕೆ. ಹೇಳಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದಿನಾಂಕ 07.01.2026 ರಂದು ಮಧ್ಯಾಹ್ನ 1:30 ಗಂಟೆಯ ಸುಮಾರಿಗೆ ಕಾರ್ಖಾನೆಯ ಬಾಯಿಲಿಂಗ್ ಹೌಸ್‌ನಲ್ಲಿ ರಿಪೇರಿ ಕೆಲಸ ನಡೆಯುತ್ತಿದ್ದಾಗ, ಕುದಿಯುತ್ತಿದ್ದ ಬಿಸಿ ದ್ರವ ಪದಾರ್ಥ (ಮಳ್ಳಿ) ಇದ್ದಕ್ಕಿದ್ದಂತೆ ಸಿಡಿದು ಎಂಟು ಜನ ಕಾರ್ಮಿಕರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನು ತಕ್ಷಣವೇ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆ ಪೈಕಿ ನೇಸರಗಿಯ ದೀಪಕ ನಾಗಪ್ಪ ಮುನವಳ್ಳಿ (32), ರಬಕವಿಯ ಅಕ್ಷಯ ಸುಭಾಷ ಚೊಪಡೆ (48) ಮತ್ತು ಚಿಕ್ಕಮುನವಳ್ಳಿಯ ಸುದರ್ಶನ ಮಹಾದೇವ ಬನೋಶಿ (25) ಬುಧವಾರವೇ
ಮೃತಪಟ್ಟಿದ್ದರು.ಗಂಭೀರ ಸ್ಥಿತಿಯಲ್ಲಿದ್ದ ಉಳಿದ ಐವರು ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಇಂದು (ಜ.
ಮಂಜುನಾಥ ಗೋಪಾಲ ತೇರದಾಳ (31), ಗುರುಪಾದಪ್ಪ ಭೀರಪ್ಪ ತಮ್ಮಣ್ಣವರ (38), ಭರತೇಶ ಬಸಪ್ಪ ಸಾರವಾಡಿ (27) ಮತ್ತು ಮಂಜುನಾಥ ಮಡಿವಾಳಪ್ಪ ಕಾಜಗಾರ (28) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗಾಯಾಳು ರಾಘವೇಂದ್ರ ಮಲ್ಲಪ್ಪ ಗಿರಿಯಾಳ (36) ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೆ.ಎಲ್.ಇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಅಲ್ಲದೆ ರಾಮದುರ್ಗ ಡಿಎಸ್‌ಪಿ ಮತ್ತು ಮುರಗೋಡ ಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 04/2026 ರಡಿ ಕಾರ್ಖಾನೆಯ ಜನರಲ್ ಮ್ಯಾನೇಜರ್ ವಿ. ಸುಬ್ಬುರತಿನಂ, ಇಂಜಿನಿಯರಿಂಗ್ ಹೆಡ್ ಪ್ರವೀಣಕುಮಾರ, ಟಾಕಿ ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್. ಬಿನೋದಕುಮಾರ ಎಂಬುವವರ ಮೇಲೆ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

