Uncategorized

ಬಂಜಾರಾ ಸಮಾಜದಿಂದ ಬೆಳಗಾವಿ ಮಹಾಪೌರರಿಗೆ ಮನವಿ

ಬಂಜಾರಾ ಸಮಾಜದಿಂದ ಬೆಳಗಾವಿ ಮಹಾಪೌರರಿಗೆ ಮನವಿ

ಬಂಜಾರಾ ಸಮಾಜದಿಂದ ಬೆಳಗಾವಿ ಮಹಾಪೌರರಿಗೆ ಮನವಿ
ಬೆಳಗಾವಿ ನಗರದ ಸಂಗಮೇಶ್ವರ ನಗರದಲ್ಲಿರುವ ಮಹಾನಗರ ಪಾಲಿಕೆಯ 14 ಗುಂಟೆ ಜಾಗವನ್ನು ಬಂಜಾರಾ ಸಮುದಾಯದ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕೆಂದು ಸಮಾಜದ ಮುಖಂಡರು ಬೆಳಗಾವಿ ಮಹಾಪೌರ ಮಂಗೇಶ್ ಪವಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಉತ್ತರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 25 ರಿಂದ 30 ಸಾವಿರದಷ್ಟು ಬಂಜಾರಾ ಸಮುದಾಯದ ಜನಸಂಖ್ಯೆ ಇದ್ದು, ಕಳೆದ ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ.
ಈ ಹಿಂದೆ ಇದೇ ಜಾಗದಲ್ಲಿ ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ 3 ಕೋಟಿ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು.
ಆದರೆ, ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ಅನುದಾನವು ಮರಳಿ ಸರ್ಕಾರಕ್ಕೆ ಜಮೆಯಾಗಿರುವುದು ಸಮುದಾಯಕ್ಕೆ ಅನ್ಯಾಯವಾದಂತಾಗಿದೆ. ಬೆಳಗಾವಿ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಬಂಜಾರಾ ಕುಟುಂಬಗಳಿಗೆ ಯಾವುದೇ ಸರ್ಕಾರಿ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸಮುದಾಯಕ್ಕೆ ಸ್ವಂತ ಭವನದ ಅವಶ್ಯಕತೆ ಹೆಚ್ಚಿದೆ.
ಆದ್ದರಿಂದ, ಈ ಹಿಂದೆ ಗುರುತಿಸಲಾದ 14 ಗುಂಟೆ ನಿವೇಶನವನ್ನು ಅಧಿಕೃತವಾಗಿ ಬಂಜಾರಾ ಸಮಾಜಕ್ಕೆ ಹಸ್ತಾಂತರಿಸಬೇಕು. ಈ ಮೂಲಕ ಸ್ಥಗಿತಗೊಂಡಿರುವ ಯೋಜನೆಯನ್ನು ಪುನರಾರಂಭಿಸಿ, ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಸಂಬಂಧಿಸಿದ ದಾಖಲೆಗಳೊಂದಿಗೆ ಸಮಾಜದ ವತಿಯಿಂದ ಪಾಲಿಕೆಗೆ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಶಿವಾನಂದ ಚವ್ಹಾಣ್, ಶರತ್ ಪೋವಾರ್, ಪ್ರಕಾಶ್ ರಾಠೋಢ್, ಸುರೇಶ್ ಲಮಾಣಿ, ಲೋಕೇಶ್ ರಾಠೋಢ್, ಅರ್ಜುನ ರಾಠೋಢ್ ಇನ್ನುಳಿದವರು ಭಾಗಿಯಾಗಿದ್ಧರು.

Related Articles

Leave a Reply

Your email address will not be published. Required fields are marked *

Back to top button