Uncategorized
ಮೂಡಲಗಿ: ಪಟ್ಟಣದಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ಭಾರಿ ಮಳೆ 4 ಸೇತುವೆ ಜಲಾವೃತ

ಮೂಡಲಗಿ: ಪಟ್ಟಣದಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಘಟಪ್ರಭಾ ನದಿಯ ಒಳಹರಿವು ಅಧಿಕವಾಗಿ ಮಂಗಳವಾರ ಬೆಳಿಗ್ಗೆ ಸುಣಧೋಳಿ, ಕಮಲದಿನ್ನಿ, ಹುಣಶ್ಯಾಳ ಪಿ.ವೈ., ಅವರಾದಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಕಳೆದ ವಾರ ಸೇತುವೆಗಳು ಜಲಾವೃತಗೊಂಡು ಒಂದೆರಡು ದಿನಗಳಲ್ಲಿ ತೆರವುಗೊಂಡಿದ್ದವು. ಈಗ ಮತ್ತೆ ಅಧಿಕ ಮಳೆಯ ಪರಿಣಾಮ ಸೇತುವೆಗಳು ಮುಳಗಿ ಸಂಚಾರಕ್ಕಾಗಿ ಜನರು ಸುತ್ತಿ ಬಳಸಿ ಸಾಗುತ್ತಿದ್ದಾರೆ. ಶಾಲೆ, ಕಾಲೇಜುಗಳಿಗೆ ಹೋಗಿದ್ದ ಅವರಾದಿ ಭಾಗದ ವಿದ್ಯಾರ್ಥಿಗಳಿಗೆ ಸಂಚಾರ ತಡೆಯಾಗಿದ್ದು, ಮನೆಗೆ ಸೇರುವುದು ಕಷ್ಟವಾಗಿದೆ.
ತಹಶೀಲ್ದಾರ್ ಶಿವಾನಂದ ಬಬಲಿ ಅವರು, ಜಲಾವೃತಗೊಂಡಿರುವ ಸೇತುವೆಗಳ ಮೇಲೆ ಸಂಚಾರ ನಿಷೇಧಿಸಿ ಮಂಗಳವಾರ ಪ್ರಕಟಣೆ ಹೊರಡಿಸಿದ್ದಾರೆ.