Uncategorized
ಮನೆ ಮನೆಗೆ ಹೋಗಿ ರಾಜ್ಯದ ಜನರ ಆರೋಗ್ಯ ತಪಾಸಣೆ ಯೋಜನೆಗೆಸಿದ್ದರಾಮಯ್ಯ ಚಾಲನೆ
ಮನೆ ಮನೆಗೆ ಹೋಗಿ ರಾಜ್ಯದ ಜನರ ಆರೋಗ್ಯ ತಪಾಸಣೆ

ಮನೆ ಮನೆಗೆ ಹೋಗಿ ರಾಜ್ಯದ ಜನರ ಆರೋಗ್ಯ ತಪಾಸಣೆ ನಡೆಸುವ ಅತ್ಯುನ್ನತ ಆರೋಗ್ಯಸೇವೆ ಗೃಹ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಗ್ರಾಮೀಣ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳ ಮನೆ ಮನೆಗಳಿಗೂ ಎರಳಿ ಆರೋಗ್ಯ ಸಿಬ್ಬಂದಿಗಳು ಆರೋಗ್ಯ ತಪಾಸಣೆ ನಡೆಸಿ, ಬಿಪಿ, ಶುಗರ್ ಇದ್ದವರಿಗೆ ಉಚಿತವಾಗಿ ಔಷಧಗಳನ್ನು ತಲುಪಿಸಲಿದ್ದಾರೆ. ಇಂತದ್ದೊಂದು ಮಹತ್ವದ ಯೋಜನೆ ರಾಜ್ಯಾದ್ಯತ ಇಂದಿನಿಂದ ಜಾರಿಗೆ ಬಂದಿದೆ.
ಗೃಹ ಆರೋಗ್ಯ ಸೇವೆ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು 30 ವರ್ಷಗಳಿಂದ ಸಕ್ಕರೆ ಕಾಯಿಲೆಯನ್ನು ನಿರ್ವಹಿಸುತ್ತಿದ್ದೇನೆ: ವ್ಯಾಯಾಮ, ಶಿಸ್ತಿನ ಜೀವನಶೈಲಿಯಿಂದ ಡಯಾಬಿಟಿಕ್ ನಿಯಂತ್ರಿಸಬಹುದು ಎಂದು ಭರವಸೆಯ ಮಾತುಗಳನ್ನಾಡಿದರು.