
ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಬಿದ್ದಾಪುರ ಕಾಲೋನಿ ರೈಲ್ವೆ ಗೇಟ್ ಬಳಿ ನಡೆದಿದೆ.
ವೀರೇಶ್ ಸ್ವಾಮಿ (16) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಇಂದು ಬೆಳಿಗ್ಗೆ ಮನೆಯಿಂದ ಟ್ಯೂಷನ್ ಗೆ ಹೋಗಿದ್ದ ವಿರೇಶ್, ವಾಂತಿ ಬರುತ್ತಿದೆ ಎಂದು ಹೇಳಿ ಕ್ಲಾಸ್ ನಿಂದ ಹೊರಬಂದಿದ್ದ. ಟ್ಯೂಷನ್ ಕ್ಲಾಸ್ ನಿಂದ ಹೊರಬಂದವನು ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.