Uncategorized

ಸರ್ಕಾರ ರಾಜ್ಯಶಾಸ್ತ್ರದ ಸಂಕೀರ್ಣ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಿ – ಎಂ ಎಸ್ ಹೋಳಿಮಠ.

ಹುಕ್ಕೇರಿ : ಸರ್ಕಾರ ರಾಜ್ಯಶಾಸ್ತ್ರದ ಸಂಕೀರ್ಣ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಿ – ಎಂ ಎಸ್ ಹೋಳಿಮಠ.
ರಾಜ್ಯ ಶಾಸ್ತ್ರ ಮತ್ತು ರಾಜಕೀಯ ಸಿದ್ದಾಂತಗಳು ಸರಳವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶದಿಂದ ಈ ಗ್ರಂಥ ರಚಿಸಲಾಗಿದೆ ಎಂದು ಯುವ ಲೇಖಕ ಮಲ್ಲಿಕಾರ್ಜುನ ಹೋಳಿಮಠ ಹೇಳಿದರು.
ಹುಕ್ಕೇರಿ ನಗರದಲ್ಲಿ ಯುವ ಲೇಖಕ ಎಂ ಎಸ್ ಹೋಳಿಮಠ ರವರು ರಚಿಸಿದ ರಾಜ್ಯ ಶಾಸ್ತ್ರ ಮತ್ತು ರಾಜಕೀಯ ಸಿದ್ದಾಂತಗಳು ಎಂಬ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಅಡವಿ ಶ್ರೀ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹುಕ್ಕೇರಿ ತಾಲೂಕು ಘಟಕದ ಸಹಯೋಗದಲ್ಲಿ ಜರುಗಿತು.
ಪಟ್ಟಣದ ಕೋಷ್ಟಿ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮವನ್ನು ವೀರಕ್ತ ಮಠದ ಶಿವ ಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಿವೃತ್ತ ಪ್ರಾಂಶುಪಾಲ ಸತೀಶ ಗವತಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ನಿವೃತ್ತ ಉಪನ್ಯಾಸಕ ಬಿ,ಬಿ, ಪಾಟೀಲ, ಗಣ್ಯರಾದ ರಾಜಶೇಖರ ಮುಚ್ಚಂಡಿ, ಕ.ಸಾ.ಪ ಅಧ್ಯಕ್ಷ ಪ್ರಕಾಶ ಅವಲಕ್ಕಿ,ಉದ್ಯಮಿ ವಿರೂಪಾಕ್ಷ ವಿಭೂತಿಮಠ, ನಿವೃತ್ತ ಶಿಕ್ಷಕಿ ಉಮಾ ಹಿರೇಮಠ, ಭೀಮಾನಂದ ಮುದಕನ್ನವರ,ಸಾಹಿತಿ ರಾಜಶೇಖರ ಇಚ್ಚಂಗಿ ಉಪಸ್ಥಿತರಿದ್ದರು.
ನಂತರ ಹೋಳಿಮಠ ಪುಟಾಣಿಗಳು ಗ್ರಂಥದ ಬುತ್ತಿಯನ್ನು ವಾದ್ಯ ಮೇಳಗಳೊಂದಿಗೆ ಮೇರವಣೆಗೆ ಮೂಲಕ ಬರಮಾಡಿಕೊಂಡ ಶ್ರೀಗಳು ಮತ್ತು ಗಣ್ಯರು ಗ್ರಂಥ ಲೋಕಾರ್ಪಣೆ ಮಾಡಿದರು.
ಡಾ, ಸತೀಶ ಗವತಿ ಮಾತನಾಡಿ ಕೇವಲ ಅತಿಥಿ ಶಿಕ್ಷಕರಾದ ಮಲ್ಲಿಕಾರ್ಜುನರವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡಿ ಈ ಗ್ರಂಥ ರಚಿಸಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು
ಮಾಧ್ಯಮಗಳೊಂದಿಗೆ ಮಾತನಾಡಿದ ಲೇಖಕ ಎಮ್ ಎಸ್ ಹೋಳಿಮಠ ಪ್ಲೇಟೋ, ಅರಿಸ್ಟಾಟಲ್, ಕಾಲ್೯ ಮಾಕ್ಸ್ ಇಂದ ಹಿಡಿದು ಆಧುನಿಕ ರಾಜಕೀಯ ಚಿಂತಕರ ಸಿದ್ಧಾಂತಗಳನ್ನು ಸ್ಥಳೀಯ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ರಾಜ್ಯಶಾಸ್ತ್ರ ಪಠ್ಯದ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಗ್ರಂಥ ಮಹತ್ವದ ಹೆಜ್ಜೆಯಾಗಿದೆ ಗಡಿ ಭಾಗದ ಪದವಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಉಪಯುಕ್ತವಾಗಿದೆ ಎಂದರು
ಯುವ ಲೇಖಕ ಙ್ನು ಅಭಿಮಾನಿಗಳು ಸತ್ಕರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತ ಅದ್ಯಕ್ಷ ಸುಭಾಷ ನಾಯಿಕ, ಶ್ರೀಶೈಲ ಸಂಬಾಳ,ಪ್ರಕಾಶ ಹೋಸಮನಿ, ಶಿವಾನಂದ ಗುಂಡಾಳೆ,ಕಿರಣ ಕರೋಶಿ,ಎಸ್ ನಂಜುಡಪ್ಪ, ಮಹಾವೀರ ಬಾಗಿ ಸೇರಿದಂತೆ ಹೋಳಿಮಠ, ವಿಭೂತಿಮಠ ಬಂಧುಗಳು ,ಅಭಿಮಾನಿಗಳು ಹೇಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕೊನೆಯಲ್ಲಿ ಶ್ರೀಗಳಿಂದ ಆಶಿರ್ವಚನ ಜರುಗಿತು

Related Articles

Leave a Reply

Your email address will not be published. Required fields are marked *

Back to top button