Uncategorized
ಕೊರ್ತಿ-ಕೊಲ್ಹಾರ ಬ್ರಿಡ್ಜ್ ಮೇಲಿಂದ ಬಿದ್ದ ಟಿಪ್ಪರ್

ಕೊರ್ತಿ-ಕೊಲ್ಹಾರ ಬ್ರಿಡ್ಜ್ ಮೇಲಿಂದ ಬಿದ್ದ ಟಿಪ್ಪರ್
ಬೀಳಗಿ : ಕೊರ್ತಿ-ಕೊಲ್ಹಾರ ಸೇತುವೆ ಮೇಲೆ ಟಿಪ್ಪರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಟಿಪ್ಪರ್ ನದಿಗೆ ಉರುಳಿಬಿದ್ದ ಭೀಕರ ಘಟನೆ ನಡೆದಿದೆ.
ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದು, ನಿಯಂತ್ರಣ ತಪ್ಪಿ ಸೇತುವೆಯಿಂದ ಕೃಷ್ಣಾ ನದಿಗೆ ಉರುಳಿ ಬಿದ್ದಿದೆ.
ಟಿಪ್ಪರ್ ಚಾಲಕ ಸಂತೋಷ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯ ನಡೆದಿದೆ, ಕ್ಲೀನರ್ ಸಂಜು ಅವರನ್ನು ರಕ್ಷಿಸಲಾಗಿದೆ.
ಕಾರಿನಲ್ಲಿದ್ದ ಗುರುನಾಥ ಹಾಗೂ ಅವರ ಪತ್ನಿ ಜ್ಯೋತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಧಾವಿಸಿ ಕಾರ್ಯಾಚರಣೆ ಮುಂದುವರೆಸಿವೆ.



