ಮೈಯೆಲ್ಲಾ ರಕ್ತ, ಯುವ ರಾಜ್‌ಕುಮಾರ್‌ಗೆ ಏನಾಯ್ತು?

ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಬಂದಿದ್ದಾರೆ. ಈಗಾಗಲೇ ‘ಯುವ’ ಚಿತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ಇತ್ತೀಚೆಗೆ ಎರಡನೇ ಸಿನಿಮಾ ಕೂಡ ಘೋಷಣೆ ಆಗಿದೆ. ರಾಜ್ಯೋತ್ಸವಕ್ಕೆ ಟೈಟಲ್ ಸಮೇತ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ.
ಇದೆಲ್ಲದರ ನಡುವೆ ಯುವ ರಾಜ್‌ಕುಮಾರ್ ವೀಡಿಯೋವೊಂದು ಸದ್ದು ಮಾಡ್ತಿದೆ.
ಯುವ ರಾಜ್‌ಕುಮಾರ್ ಗಾಯಗೊಂಡು ಮೈಯಲ್ಲಿ ರಕ್ತ ಸುರಿಯುತ್ತಿದ್ದರೆ ಪೊಲೀಸರು ಅವರನ್ನು ಹಿಡಿದುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗ್ತಿದೆ. ಅಷ್ಟಕ್ಕೂ ಯುವ ರಾಜ್‌ಕುಮಾರ್‌ಗೆ ಏನಾಯ್ತು? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಸಾಕಷ್ಟು ಜನ ಸುತ್ತಾ ಜಮಾಯಿಸಿದ್ದು ಏನಾಯ್ತು ಎಂದು ನೋಡುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು.
ಅಂದಹಾಗೆ ಇದು ‘ಯುವ 02’ ಸಿನಿಮಾ ಟೀಸರ್ ಶೂಟ್ ಎನ್ನಲಾಗ್ತಿದೆ. ಅಲ್ಲಿ ಯಾರೋ ಮೊಬೈಲ್‌ನಲ್ಲಿ ಈ ವೀಡಿಯೋ ಸೆರೆ ಹಿಡಿದು ವೈರಲ್ ಮಾಡುತ್ತಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಜಂಟಿಯಾಗಿ ‘ಯುವ 02’ ಚಿತ್ರವನ್ನು ನಿರ್ಮಾಣ ಮಾಡಲಿವೆ. ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅಧಿಕೃತವಾಗಿ ಈಗಾಗಲೇ ಸಿನಿಮಾ ಘೋಷಣೆ ಆಗಿದೆ.
5 Days to go for #Yuva02 Title Announcement ✨ on November 1st 💛❤️ ಕನ್ನಡ ರಾಜ್ಯೋತ್ಸವ 💛❤️
#Yuvarajkumar #Puneethrajkumar pic.twitter.com/Jvh6m0wvs2— Sagar Ka (@SagarKa677800) October 26, 2024