ಬೆಳಗಾವಿ
ತಲೆಯ ಮೇಲೆ ಸ್ಮಶಾನದ ಮೇಲ್ಛಾವಣಿ ಪತ್ರಾಸ್ ಕಳಚಿ ಬಿದ್ದು ಗಾಯ…!!! ಬೆಳಗಾವಿಯ ಶಹಾಪೂರ ಸ್ಮಶಾನ ಭೂಮಿಯ ದುರಾವಸ್ಥೆಗೆ ಅಸಮಾಧಾನ…
ತಲೆಯ ಮೇಲೆ ಸ್ಮಶಾನದ ಮೇಲ್ಛಾವಣಿ ಪತ್ರಾಸ್ ಕಳಚಿ ಬಿದ್ದು ಗಾಯ…!!! ಬೆಳಗಾವಿಯ ಶಹಾಪೂರ ಸ್ಮಶಾನ ಭೂಮಿಯ ದುರಾವಸ್ಥೆಗೆ ಅಸಮಾಧಾನ…

ತಲೆಯ ಮೇಲೆ ಸ್ಮಶಾನದ ಮೇಲ್ಛಾವಣಿ ಪತ್ರಾಸ್ ಕಳಚಿ ಬಿದ್ದು ಗಾಯ…!!!
ಬೆಳಗಾವಿಯ ಶಹಾಪೂರ ಸ್ಮಶಾನ ಭೂಮಿಯ ದುರಾವಸ್ಥೆಗೆ ಅಸಮಾಧಾನ…
ಅಸ್ಥಿವಿಸರ್ಜನೆಗೆ ಸ್ಮಶಾನಕ್ಕೆ ಬಂದ ವ್ಯಕ್ತಿಯ ತಲೆಯ ಮೇಲೆ ಶವದಹನ ಸ್ಥಳದಲ್ಲಿದ್ದ ಮೇಲ್ಛಾವಣಿ ಕುಸಿದು ಬಿದ್ದು ಗಾಯಗೊಂಡ ಘಟನೆ ಬೆಳಗಾವಿ ಶಹಾಪೂರದಲ್ಲಿ ನಡೆದಿದೆ.
ಬೆಳಗಾವಿಯ ಶಹಾಪೂರದ ಸ್ಮಶಾನ ಭೂಮಿಯಲ್ಲಿ ದೇವೇಂದ್ರ ಹೊಡಕರ ಎಂಬುವರ ಮಾವನವರ ಪಾರ್ಥಿವಕ್ಕೆ ಅಗ್ನಿಸ್ಪರ್ಶ ಮಾಡಲಾಗಿದ್ದು, ಇಂದು ಅಸ್ಥಿ ವಿಸರ್ಜನೆ ಇತ್ತು.
ಹಾಲು-ತುಪ್ಪ ಬಿಟ್ಟು ಅಸ್ಥಿಗಳನ್ನು ಎತ್ತುವಾಗ ಶವ ದಹನ ಸ್ಥಳದಲ್ಲಿದ್ದ ಶಿಥಿಲಾವಸ್ಥೆಯಲ್ಲಿದ್ದ ಮೇಲ್ಛಾವಣಿಯ ತುಣುಕು ಅವರ ತಲೆಯ ಮೇಲೆ ಕುಸಿದು ಬಿದ್ದು, ಗಾಯಗೊಂಡಿದ್ದಾರೆ.
ತಲೆಯ ಮೇಲೆ ತುಕ್ಕು ಹಿಡಿದ ಮೇಲ್ಛಾವಣಿಯ ಪತ್ರಾಸ್ ಬಿದ್ದು ಪರಚಿದ ಗಾಯವಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಮಶಾನದಲ್ಲಿನ ದುರಾವಸ್ಥೆಯನ್ನು ದೂರಗೊಳಿಸಿ ಅನಾಹುತಗಳನ್ನು ತಪ್ಪಿಸಬೇಕೆಂದು ಆಗ್ರಹಿಸಲಾಗುತ್ತಿದೆ.