ಮಾಕಾಪೂರು ಆಸ್ಪತ್ರೆಗೆ ಎಂಬಿಬಿಎಸ್ ವೈದ್ಯರನ್ನು ಆರೋಗ್ಯ ಕೇಂದ್ರಕ್ಕೆ ನೇಮಿಸಲು ಮನವಿ.

ಮುದಗಲ್ : ಪಟ್ಟಣ ಸಮೀಪದ ಮಾಕಾಪೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನೇಮಿಸಬೇಕೆಂದು ಕರುನಾಡ ವಿಜಯ ಸೇನೆ ರಾಮತ್ನಾಳ ಗ್ರಾಮ ಘಟಕದ ಪದಾಧಿಕಾರಿಗಳು ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ
ಮಾಕಾಪೂರು ಪ್ರಾಥಮಿಕ ಆರೋಗ್ಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳು ಕೊರತೆಯಿಂದ ಸರಿಯಾಗಿ ಚಿಕಿತ್ಸೆ ಸಿಗದ ಹಿನ್ನಲೆಯಲ್ಲಿ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಂಬಿಬಿಎಸ್ ವೈದ್ಯರನ್ನು ಮುದಗಲ್ ಸಮುದಾಯದ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ ಹಾಗೂ ಸ್ಟಾಪ್ ನರ್ಸ ಕೊರತೆಯಿಂದ ಸರಿಯಾದ ಸಮಯಕ್ಕೆ ಬಡರೋಗಿಗಳಿಗೆ ಚಿಕಿತ್ಸೆ ಸಿಗದೆ ಹಿನ್ನಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲು ಹಿಂದೇಟು ಹಾಕುವಂತ ಪರಸ್ಥಿತಿ ನಿರ್ಮಾಣವಾಗಿದೆ ಮತ್ತು ಇರುವ ಸಿಬ್ಬಂದಿಗಳು ಕೂಡ ಸರಿಯಾದ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವದಿಲ್ಲ ಬಡ ರೋಗಗಳಿಗೆ ತುಂಬಾ ತೊಂದರೆಯಾಗಿದೆ
ಈ ಕೂಡಲೆ ಆರೋಗ್ಯ ಸಚಿವರು ಮಾಕಾಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಸ್ವಚ್ಛತೆ ಮಾಡಬೇಕು ಹಾಗೂ ಎಂಬಿಬಿಎಸ್ ವೈದ್ಯರನ್ನು ಹಾಗೂ ಹೆಚ್ಚಿನ ಸ್ಟಾಪ್ ನರ್ಸನ್ನು ನೇಮಕಾತಿ ಮಾಡಬೇಕು ಹಾಗೂ ಪೂರ್ಣಗೊಂಡಿರುವ ಹೆರಿಗೆ ಕೊಠಡಿ ಉದ್ಘಾಟನೆ ಮಾಡಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರಾಮತ್ನಾಳ ಕರುನಾಡ ವಿಜಯ ಸೇನೆ ಅಧ್ಯಕ್ಷ ಸಂಗನಗೌಡ ಪಾಟೀಲ್, ಅಂದಪ್ಪ ನಾಯಕ ಮಂಜುನಾಥ ಮಾದರ ಕೃಷ್ಣ ಚಲುವಾದಿ ಶರಣಗೌಡ ಪಾಟೀಲ್ ಸೇರಿದಂತೆ ಮುಂತಾದವರು ಇದ್ದರು