
ಜಿಲ್ಲಾ ಮಟ್ಟದ ಅಂಚೆಚೀಟಿಗಳ ಸಂಗ್ರಹದ ವಸ್ತು ಪ್ರದರ್ಶನ, ಮಾಹಿತಿ ಪುಸ್ತಕ ಹಾಗೂ ಲೋಗೋ ಅನಾವರಣ
ಬೆಳಗಾವಿಯಲ್ಲಿ ಜ.8ರಿಂದ 10ರವರೆಗೆ ನಡೆಯಲಿರುವ ಜಿಲ್ಲಾ ಮಟ್ಟದ ಅಂಚೆಚೀಟಿಗಳ ಸಂಗ್ರಹದ ವಸ್ತುಪ್ರದರ್ಶನದ ಮಾಹಿತಿ ಕರಪತ್ರ ಹಾಗೂ ಲೋಗೋ ಅನಾವರಣ.
: ಬೆಳಗಾವಿಯಲ್ಲಿ ಜ.8ರಿಂದ 10ರವರೆಗೆ ಜಿಲ್ಲಾ ಮಟ್ಟದ ಅಂಚೆಚೀಟಿಗಳ ಸಂಗ್ರಹ ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಮಂಗಳವಾರ ಈ ಕಾರ್ಯಕ್ರಮದ ಮಾಹಿತಿ ಕಿರುಪುಸ್ತಕ ಹಾಗೂ ಲಾಂಛನವನ್ನು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯಾ ಬಾಪಟ್ ಅನಾವರಣಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ನಿಜಲಿಂಗಪ್ಪ ಶುಗರ್ಸ್ ಸಂಸ್ಥೆಯ ನಿರ್ದೇಶಕ ಚಿದಾನಂದ ಪಾಟೀಲ, ಬೆಳಗಾವಿ ಅಂಚೆ ಇಲಾಖೆಯ ಅಧೀಕ್ಷಕ ವಿಜಯ ವಡೋಣಿ, ರಮೇಶ ಕಾಂಬಳೆ, ವೆಂಕಟೇಶ ಬಾದಾಮಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿಜಲಿಂಗಪ್ಪ ಶುಗರ್ಸ್ ಸಂಸ್ಥೆಯ ನಿರ್ದೇಶಕ ಚಿದಾನಂದ ಪಾಟೀಲ ಅವರು ಅಂಚೆ ಇಲಾಖೆ ನಿರಂತರ ಸೇವೆಯನ್ನು ಶ್ಲಾಘಿಸಿ ಅಂಚೆ ಇಲಾಖೆಯ ನೂತನ ಕಾರ್ಯಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನದ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ವೇತಾ ದೇಶಪಾಂಡೆ, ಸಹಾಯಕ ಅಧೀಕ್ಷಕಿ ಐ.ಆರ್.ಮುತ್ನಲಿ, ಆ್ಯಂಕರ್ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಅಂಚೆಚೀಟಿಗಳ ಸಂಗ್ರಹದ ಗುಂಪಿನ ಸದಸ್ಯರು, ಅಂಚೆ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.