ರಾಷ್ಟ್ರೀಯ
ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ!
ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ!

ಎಲ್ಲರ ಕನಸಿನ ಪ್ರವಾಸ ಅಂದ್ರೆ ಅದು ಗೋವಾ. ಬೀಚ್, ಅಲ್ಲಿ ಸಿಗೋ ಅಗ್ಗದ ಮದ್ಯ, ಪ್ರಕೃತಿ ಸೌಂದರ್ಯ, ಪ್ರಾಚೀನ ಕೋಟೆಗಳವರೆಗೆ ಎಲ್ಲವೂ ಇಲ್ಲಿ ಬರೋ ಪ್ರವಾಸಿಗರಿಗೆ ಅಚ್ಚಮೆಚ್ಚು. ರಜೆ ಸಿಕ್ರೆ ಇಲ್ಲಾ ಫ್ಯಾಮಿಲಿ ಜೊತೆಗೆ ಟ್ರಿಪ್ ಮಾಡಿದರೆ ತಲೆಗೆ ಬರೋ ಮೊದಲ ಹೆಸರೇ ಗೋವಾ.
ವಿದೇಶಗಳಿಂದಲೂ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.
ಆದರೆ ಈ ಕ್ರೇಜ್ ಎಲ್ಲಾ ಕೋವಿಡ್ ಮುಗಿದ ಮೇಲೆ ಕಮ್ಮಿ ಆದಂತಿದೆ. ಜನಜಂಗುಳಿಯಿಂದ ಇದ್ದ ಗೋವಾ ಖಾಲಿ ಖಾಲಿ ಆಗಿದೆಯಂತೆ. ವಿದೇಶಿಗರ ಬರುವಿಕೆ ತೀರಾ ಕಡಿಮೆಯಾಗಿದೆ.
ಗೋವಾದಲ್ಲಿ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಗಮನಾರ್ಹ ಇಳಿಕೆ
ಗೋವಾ ಜಾಗತಿಕ ಪ್ರವಾಸೋದ್ಯಮ ಹಾಟ್‌ಸ್ಪಾಟ್ ಆಗಿದ್ದು, ಏಕಾಏಕಿ ರಾಜ್ಯವು ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತವನ್ನು ಎದುರಿಸುತ್ತಿದೆ. ರಾಜ್ಯದ ದೇಶೀಯ ಪ್ರವಾಸೋದ್ಯಮವು ಚೇತರಿಸಿಕೊಂಡಿದ್ದರೂ, ವಿದೇಶಿ ಪ್ರವಾಸಿಗರ ಸಂಖ್ಯೆಯು ಇನ್ನೂ ಪೂರ್ವ-ಸಾಂಕ್ರಾಮಿಕ ಮಟ್ಟಕ್ಕೆ ಮರಳಿಲ್ಲ.