Uncategorized

ಇದು ಆತ್ಮಹತ್ಯೆ ಭಾಗ್ಯ ನೀಡಿದ ಸರ್ಕಾರ;b.j.p.

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್‌ ಜಿಲ್ಲಾ ಘಟಕಗಳಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು.

ಒಂದು ತಾಸಿಗೂ ಹೆಚ್ಚು ಸಮಯ ಸಂಚಾರ ಬಂದ್‌ ಮಾಡಿ ಆಕ್ರೋಶ ಹೊರಹಾಕಿದರು. ಅಲ್ಲಿಂದ ಬಾಯಿಬಾಯಿ ಬಡಿದುಕೊಳ್ಳುತ್ತ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ, ಸಚಿವೆ ಹೆಬ್ಬಾಳಕರಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಕೂಡ ನೀಡಿದರು.

ನೇತೃತ್ವ ವಹಿಸಿದ್ದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ‘ರುದ್ರಣ್ಣ ಸಾವಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ನೇರ ಕಾರಣರಾಗಿದ್ದಾರೆ. ಅವರು ಹೇಳಿದ ಕಾರಣಕ್ಕಾಗಿಯೇ ಅವರ ಪಿ.ಎ ಸೋಮು ದೊಡವಾಡೆ ಎಂಬಾತ ರುದ್ರಣ್ಣ ಬಳಿ ಕಮಿಷನ್‌ ಪಡೆದುಕೊಂಡಿದ್ದಾನೆ. ಈ ವಿಚಾರವನ್ನು ಸ್ವತಃ ರುದ್ರಣ್ಣ ವಾಟ್ಸ್‌ಆಯಪ್‌ ಗ್ರೂಪಿನಲ್ಲಿ ಮೆಸೇಜ್‌ ಮಾಡಿದ್ದಾರೆ. ಇಷ್ಟೆಲ್ಲ ಆದರೂ ಸಾವಿಗೂ ತಮಗೂ ಸಂಬಂಧಿವೇ ಇಲ್ಲ ಎಂದು ಸಚಿವೆ ವಾದಿಸುತ್ತಿದ್ದಾರೆ. ಕೆ.ಎಸ್‌.ಈಶ್ವರಪ್ಪ ಪ್ರಕಣಕ್ಕೂ, ಇದಕ್ಕೂ ವ್ಯತ್ಯಾಸವಿದೆ ಎನ್ನುತ್ತಿದ್ದಾರೆ. ವ್ಯತ್ಯಾಸ ಇರಬಹುದು ಆದರೆ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಅರವಿಂದ ಬೆಲ್ಲದ, ವಿಪಕ್ಷ ಉಪನಾಯಕರುದ್ರಣ್ಣ ಅವರು ಸಚಿವರೊಂದಿಗೂ ಮಾತನಾಡಿದ ಕಾಲ್‌ ರೆಕಾರ್ಡ್‌ ಇವೆ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡುವಂತಿಲ್ಲ.‘ರುದ್ರಣ್ಣ ಸತ್ತು ಮೂರು ದಿನಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಸಚಿವರೇ ಅವರನ್ನು ಪರಾರಿ ಮಾಡಿಸಿದ್ದಾರೆ. ತಮಗಿಷ್ಟ ಬಂದಂತೆ ತನಿಖೆ ಮಾಡಿಸಲು ಪೊಲೀಸರ ಮೇಲೆ ಒತ್ತಡ ತಂದಿದ್ದಾರೆ. ಇವರ ಮೇಲೆ ನಮಗೆ ನಂಬಿಕೆ ಇಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದೂ ಆಗ್ರಹಿಸಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಲಿಂಗಾಯತ ಹೋರಾಟದಲ್ಲಿ ಯಾವಾಗಲೂ ಮುಂದಿರುತ್ತಾರೆ. ಆದರೆ, ಅವರದೇ ಸಮಾಜಕ್ಕೆ ಸೇರಿದ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಜನ್ಯಕ್ಕೂ ಸಚಿವೆ ಅವರ ಮನೆಗೆ ಭೇಟಿ ನೀಡಿಲ್ಲ. ಎರಡು ದಿನ ಮೌನ ಇದ್ದು, ಸಾಕ್ಷ್ಯ ನಾಶ ಮಾಡಿದ ಬಳಿಕ ಅವರು ಮಾತನಾಡಿದ್ದಾರೆ. ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಹೇಳಿದ್ದಾರೆ. ಇದು ಹಾಸ್ಯಾಸ್ಪದ. ಎಲ್ಲ ಸಾಕ್ಷ್ಯ ನಾಶ ಮಾಡಿದ ಮೇಲೆ ನಿಖರ ತನಿಖೆ ಹೇಗೆ ಆಗುತ್ತದೆ’ ಎಂದು ಆರೋಪಿಸಿದರು.

ಸಂಜಯ ಪಾಟೀಲ, ಮಾಜಿ ಶಾಸಕಕರ್ನಾಟಕದಲ್ಲಿ ಹೆಗ್ಗಣಗಳು ಎಷ್ಟಿವೆಯೋ ಅಷ್ಟೇ ಪ್ರಮಾಣದಲ್ಲಿ ಕಾಂಗ್ರೆಸ್‌ ಹಗರಣಗಳಿವೆ. ಇದು ಆತ್ಮಹತ್ಯೆ ಭಾಗ್ಯ ನೀಡಿದ ಸರ್ಕಾರವಾಗಿದೆ.

Related Articles

Leave a Reply

Your email address will not be published. Required fields are marked *

Back to top button